ಕರ್ನಾಟಕ

karnataka

ETV Bharat / sitara

6 ತಿಂಗಳ ವಿರಾಮದ ಬಳಿಕ ಮತ್ತೆ ಬಂದ್ರು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​​

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​​ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರೂ ಆ ಸಿನಿಮಾಗಳು ಹೆಸರು ಮಾಡಲಿಲ್ಲ. ಇದೀಗ ಅವರು ಸ್ವಲ್ಪ ಗ್ಯಾಪ್​ ನಂತರ ಮತ್ತೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘ ಚಿತ್ರದ ಮೂಲಕ ವಾಪಸಾಗಿದ್ದಾರೆ.

ಸಂಚಾರಿ ವಿಜಯ್​​​​

By

Published : Jul 30, 2019, 10:04 AM IST

‘ನಾನು ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದದ್ದೇ ತಡ ಸಂಚಾರಿ ವಿಜಯ್ ಅವರನ್ನು ಹುಡುಕುತ್ತಾ ಅನೇಕ ಚಿತ್ರಗಳು ಅವರ ಮನೆ ಬಾಗಿಲಿನತ್ತ ಹೊರಟವು. ಇನ್ನು ಹೊಸಬರ ಆಸೆಗೆ ತಣ್ಣೀರು ಎರಚಬಾರದು ಎಂಬ ಉದ್ದೇಶದಿಂದ ವಿಜಯ್ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಂಡರು.

'ನಾನು ನನ್ನ ಹೆಂಡತಿ', 'ಅವ್ಯಕ್ತ', 'ವರ್ತಮಾನ', 'ಕೃಷ್ಣ ತುಳಸಿ', '6 ನೇ ಮೈಲಿ', 'ಪಾದರಸ', 'ನಾತಿಚಾರಮಿ', 'ಆಡುವ ಗೊಂಬೆ' ಸಿನಿಮಾಗಳಲ್ಲಿ ಅವರು ನಟಿಸಿದರೂ ಯಾವ ಚಿತ್ರಗಳು ಕೂಡಾ ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಉಳಿಯಲಿಲ್ಲ ಎಂಬುದು ವಿಜಯ್​​​ಗೆ ನಿಧಾನವಾಗಿ ಅರಿವಾಯಿತು. ಈ ಸಿನಿಮಾಗಳು ಅವರನ್ನು ಮರು ಚಿಂತನೆ ಮಾಡುವಂತೆ ಮಾಡಿದವು. ಇದಾದ ಬಳಿಕ 6 ತಿಂಗಳ ಗ್ಯಾಪ್ ಬಳಿಕ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘, ‘ಪುಗ್ಸಟ್ಟೆ ಲೈಫು‘, ‘ಪುರುಸೊತ್ತೇ ಇಲ್ಲ‘ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾಕಷ್ಟು ಬಾರಿ ಈ ಸಿನಿಮಾಗಳ ಕಥೆ, ಚಿತ್ರಕಥೆ ವಿಮರ್ಶೆಗೆ ಒಳಗಾಗಿ ಕ್ಯಾಮರಾ ಮುಂದೆ ಬರಲು ಸಿದ್ಧವಾಗಿವೆ.

ವೃತ್ತಿಯಲ್ಲಿ ಎಂಜಿನಿಯರ್ ಆದ ರಾಮಚಂದ್ರ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಪಂಚದಲ್ಲಿ ಪ್ರತಿ ಮನುಷ್ಯನಲ್ಲಿ 0.7 ಪರ್ಸೆಂಟ್ ಒಂದು ವಿಚಾರ ಅಡಗಿರುತ್ತದೆ. ಅದೇ 100 ಪರ್ಸೆಂಟ್ ಆಗಿ ಬಿಟ್ಟರೆ ಏನಾಗಬಹುದು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ವಿಜಯ್ ಜೊತೆ ಮಯೂರಿ ಕ್ಯಾಥರಿ ಪತ್ನಿಯಾಗಿ ನಟಿಸಿದ್ದಾರೆ. ಇನ್ನು ನವೀನ್ ಕೃಷ್ಣ ನಿರ್ದೇಶನದ ‘ಮೇಲೊಬ್ಬ ಮಾಯಾವಿ’ ಬಿಡುಗಡೆಗೆ ಸಿದ್ಧವಾಗಿದೆ.

ABOUT THE AUTHOR

...view details