ಕರ್ನಾಟಕ

karnataka

ETV Bharat / sitara

ನಟಸಾರ್ವಭೌಮ ವಿಜಯಯಾತ್ರೆ: ರಾಜ್ಯದ ಪ್ರಮುಖ ಚಿತ್ರಮಂದಿರಗಳಿಗೆ ಚಿತ್ರತಂಡ - ನಟಸಾರ್ವಭೌಮ

ಪುನೀತ್ ರಾಜ್​​​ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಸಕ್ಸಸ್ ಖುಷಿಗೆ ಚಿತ್ರತಂಡ ರಾಜ್ಯಾದ್ಯಂತ ವಿಜಯ ಯಾತ್ರೆ ಕೈಗೊಂಡಿದ್ದು ರಾಜ್ಯದ ಪ್ರಮುಖ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದೆ.

ಪುನೀತ್​ ರಾಜ್​​ಕುಮಾರ್​

By

Published : Mar 1, 2019, 11:08 PM IST

ಪವರ್ ಸ್ಟಾರ್ ಪುನೀತ್​ ರಾಜ್​​ಕುಮಾರ್​ ಅಭಿನಯದ 'ನಟಸಾರ್ವಭೌಮ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಪ್ರಿಯರಂತೂ ಪುನೀತ್​ ಆ್ಯಕ್ಟಿಂಗ್ ಹಾಗೂ ಡ್ಯಾನ್ಸ್​​​ಗೆ ಫಿದಾ ಆಗಿ ಹೋಗಿದ್ದಾರೆ.

ಪುನೀತ್​ ರಾಜ್​​ಕುಮಾರ್​

ಇದೇ ಖುಷಿಯಲ್ಲಿ ಚಿತ್ರತಂಡ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ನಟಸಾರ್ವಭೌಮ ಚಿತ್ರತಂಡ ಭೇಟಿ ನೀಡಲಿದ್ದಾರೆ. ಇದೇ ಮಾರ್ಚ್ 3 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹಾವೇರಿ, 11:30ಕ್ಕೆ ರಾಣೆಬೆನ್ನೂರು, ಮಧ್ಯಾಹ್ನ 1 ಗಂಟೆಗೆ ದಾವಣಗೆರೆ. 2:30 ಕ್ಕೆ ಚಿತ್ರದುರ್ಗ, 3:30 ಹಿರಿಯೂರು, ಸಂಜೆ 4:30 ಕ್ಕೆ ಶಿರಾ, 5:30ಕ್ಕೆ ತುಮಕೂರು ಈ ಎಲ್ಲಾ ಜಿಲ್ಲೆಗಳ ಚಿತ್ರಮಂದಿರಗಳಿಗೆ ಚಿತ್ರತಂಡ ಭೇಟಿ ನೀಡುತ್ತಿದೆ.

ಅಪ್ಪುವನ್ನು ಒಂದು ಬಾರಿ ಕಣ್ಣಾರೆ ನೋಡಬೇಕು ಅಂತಾ ದೂರದಿಂದ ಬೆಂಗಳೂರಿಗೆ ಬರುವ ಎಲ್ಲಾ ಜಿಲ್ಲೆಯ ಅಭಿಮಾನಿಗಳಿಗೆ ಇದು ಸಂತೋಷದ ವಿಷಯ. ಮೆಚ್ಚಿನ ನಟನನ್ನು ತಮ್ಮ ಜಿಲ್ಲೆಯಲ್ಲೇ ನೋಡಬಹುದು. ಸ್ವತಃ ಪುನೀತ್​​​ ಈ ವಿಷಯವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ ಚಿತ್ರವನ್ನು ಗೆಲ್ಲಿಸಿದಕ್ಕೆ ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಕೂಡಾ ಪುನೀತ್​ ಅವರನ್ನು ತಮ್ಮ ಜಿಲ್ಲೆಗೆ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ.

ABOUT THE AUTHOR

...view details