ಅಭಿಮಾನಿಗಳ ಒತ್ತಾಯದ ಮೇರೆಗೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ನಗರದ ಜೆ.ಸಿ. ರಸ್ತೆಯ ಊರ್ವಶಿ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಗೊಂಡಿದೆ. ಚಳಿಯನ್ನು ಲೆಕ್ಕಿಸದೆ ಸಾವಿರಾರು ಅಭಿಮಾನಿಗಳು ರಾತ್ರಿ11 ಗಂಟೆಗೆ ಥಿಯೇಟರ್ ಬಳಿ ಜಮಾಯಿಸಿ ಪಟಾಕಿ ಸಿಡಿಸಿ ಮೆಚ್ಚಿನ ನಟನ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಸಿನಿಮಾ ನೋಡಿದ ಅಭಿಮಾನಿ ದೇವರುಗಳು ನಟಸಾರ್ವಭೌಮನಿಗೆ ಉಘೇ ಅಂದಿದ್ದಾರೆ. ಅಪ್ಪು ಡ್ಯಾನ್ಸ್ಗೆ ಥಿಯೇಟರ್ನಲ್ಲಿ ಅಭಿಮಾನಿಳು ಹುಚ್ಚೆದ್ದು ಕುಣಿದಿದ್ದಾರೆ. ಊರ್ವಶಿ ಚಿತ್ರಮಂದಿರದಲ್ಲಿ ಈಗಾಗಲೇ 7 ಶೋಗಳ ಟಿಕೆಟ್ ಬುಕ್ಕಿಂಗ್ ಆಗಿದ್ದು, 'ನಟಸಾರ್ವಭೌಮ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ಕುಮಾರ್ ಮಕ್ಕಳಾದ ವಿನಯ್ ರಾಜಕುಮಾರ್, ಯುವರಾಜ್ ಕುಮಾರ್ ಎಲ್ಲರೂ ಅಭಿಮಾನಿಗಳ ಜೊತೆ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.
ಅಭಿಮಾನಿಗಳಿಗಾಗಿ ನಾವು ಈ ಸಿನಿಮಾ ಮಾಡಿದ್ದು, ಸಿನಿಮಾದಲ್ಲಿ ಹೆಚ್ಚು ಹಾರರ್ ಎಲಿಮೆಂಟ್ ಅಂಶವಿರುವುದರಿಂದ ಈ ಚಿತ್ರವನ್ನು ರಾತ್ರಿಯೇ ನೋಡಬೇಕು ಎಂದು ಪುನೀತ್ ಅಭಿಮಾನಿಗಳು ಮನವಿ ಮಾಡಿದರು. ಅಭಿಮಾನಿಗಳಿಗಾಗಿ ನಾವು ಸಿನಿಮಾ ಮಾಡಿದ್ದರಿಂದ ಅವರು ಬಯಸಿದಾಗ ನಾವು ಚಿತ್ರ ತೋರಿಸಬೇಕು. ಆದ್ದರಿಂದ ಅವರು ಹೇಳಿದ ಸಮಯಕ್ಕೆ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಿಳಿಸಿದರು.
ರಚಿತಾ ರಾಮ್, ಪುನೀತ್ ರಾಜ್ಕುಮಾರ್ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚನ್ನಪಟ್ಟಣ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಧ್ಯರಾತ್ರಿಯೇ ಸಿನಿಮಾ ಬಿಡುಗಡೆಯಾಗಿದ್ದು, ನಟಸಾರ್ವಭೌಮನ ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಮುನ್ಸೂಚನೆ ಕೂಡಾ ನೀಡಿದೆ.