26 ವರ್ಷ ವಯಸ್ಸಿನ ಈ ತರುಣೆ ಇನ್ಸ್ಟಾಗ್ರಾಂನಿಂದಲೇ ಕೋಟ್ಯಧಿಪತಿಯಾಗಿದ್ದಾರೆ. ವರ್ಷಕ್ಕೆ ₹2 ಕೋಟಿಗೂ ಹೆಚ್ಚು ಹಣ ಇವರ ಬ್ಯಾಂಕ್ ಅಕೌಂಟ್ಗೆ ಹರಿದು ಬರುತ್ತೆ. ಅಷ್ಟಕ್ಕೂ ಅದ್ಹೇಗೆ ಈ ಚೆಲುವೆ ಹಣ ಸಂಪಾದಿಸುತ್ತಾಳೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಅವರ ಇನ್ಸ್ಟಾಗ್ರಾಂ ಖಾತೆಯನ್ನೊಮ್ಮೆ ಇಣುಕಿ ನೋಡಿದ್ರೆ ಗೊತ್ತಾಗುತ್ತೆ.
ಇವರ ಬೋಲ್ಡ್ ಫೋಟೋಗಳನ್ನು ಮುಗಿಬಿದ್ದು ನೋಡ್ತಾರೆ ; ಇನ್ಸ್ಟಾಗ್ರಾಂನಿಂದಲೇ ಕೋಟ್ಯಧಿಪತಿ ಈ ಬ್ಯೂಟಿ - ಇನ್ಸ್ಟಾಗ್ರಾಂ
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಕೇವಲ ಫೋಟೋ ಶೇರಿಂಗ್ಗೆ ಮಾತ್ರ ಸೀಮಿತವಲ್ಲ. ಅವುಗಳಿಂದ ಕೋಟ್ಯಂತರ ರೂ. ಸಂಪಾದನೆ ಮಾಡಬಹುದು ಎಂಬುದಕ್ಕೆ ಬ್ರೆಜಿಲಿಯನ್ ಬೋಲ್ಡ್ ಬ್ಯೂಟಿ ನಟಾಲಿಯಾ ಗ್ಯಾರೊಟ್ಟೊ ಸಾಕ್ಷಿ.
ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ನಟಾಲಿಯಾ ದುಡ್ಡು ಮಾಡ್ತಿರುವುದು ತನ್ನ ಬೋಲ್ಡ್ ಪೋಟೊಗಳಿಂದ. ಬಿಕಿನಿ ತೊಟ್ಟು ತನ್ನ ಮೈಮಾಟ ಪ್ರದರ್ಶಿಸುವ ಈ ಚೆಲುವೆಯ ಪ್ರತಿ ಪೋಟೊಗಳಿಗೆ ಇನ್ಸ್ಟಾಗ್ರಾಂನಲ್ಲಿ ಭಾರಿ ಡಿಮಾಂಡ್. ಒಂದೊಂದು ಲುಕ್ಗಳು ಲಕ್ಷಾಂತರ ರೂ.ಗೆ ಬೆಲೆಬಾಳ್ತವಂತೆ. ಇವರ ಒಂದು ಪಟ ಬರೋಬ್ಬರಿ 3.5 ಲಕ್ಷ ರೂಪಾಯಿಗೆ ಮಾರಾಟ ಆಗುತ್ತವೆಯಂತೆ. ಕಳೆದ ಎರಡು ವರ್ಷಗಳಿಂದ ಇದನ್ನೇ ದುಡಿಮೆಯನ್ನಾಗಿಸಿಕೊಂಡಿರುವ ನಟಾಲಿಯಾ, ಇನ್ಸ್ಟಾಗ್ರಾಂನಿಂದಲೇ ಸಾಕಷ್ಟು ಹಣ ಗಳಿಸಿದ್ದಾರಂತೆ
ಇನ್ನು ಈ ಬಗ್ಗೆ ಖುಷಿಯಿಂದಲೇ ಮಾತಾಡುವ ಈ ಬೋಲ್ಡ್ ಬ್ಯೂಟಿ , ನನ್ನ ಪೋಟೊಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ನಿತ್ಯ 100 ಕ್ಕೂ ಹೆಚ್ಚು ಮದುವೆ ಪ್ರಪೋಸಲ್ ಅರಸಿ ಬರುತ್ತವೆ. ನನ್ನಿಂದ ಸಾಕಷ್ಟು ಹುಡುಗ-ಹುಡುಗಿಯರು ಸ್ಫೂರ್ತಿಗೊಂಡು ಜಿಮ್ಗಳಿಗೆ ಹೋಗುತ್ತಿದ್ದಾರೆ. ನನ್ನಂತೆ ದುಡ್ಡು ಮಾಡಲು ಅವರಿಗೆ ನಾನು ಸ್ಫೂರ್ತಿ ತುಂಬುತ್ತಿದ್ದೇನೆ ಎಂದಿದ್ದಾರೆ.