ಕಳೆದ ತಿಂಗಳು ಅಕ್ಟೋಬರ್ 29ರಂದು ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Actor Puneeth Rajkumar) ಹೃದಯಾಘಾತದಿಂದ ನಿಧನರಾದರು. ಅಪ್ಪು ಮರಣದ ನಂತರ ನೇತ್ರದಾನ (Eye Donation) ಮಾಡಿದ್ದರು. ಅವರ ಕಣ್ಣಿನ ಕಾರ್ನಿಯಾದಿಂದ ನಾಲ್ವರಿಗೆ ದೃಷ್ಟಿ ಬಂದಿದೆ.
ಇದೀಗ ನಾರಾಯಣ ನೇತ್ರಾಲಯವು (Narayana Nethralaya) ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಪುನೀತ್ ರಾಜ್ಕುಮಾರ್ ಅವರ ಕಣ್ಣಿನಿಂದ ಇನ್ನೂ ಹಲವು ಜನಕ್ಕೆ ದೃಷ್ಟಿ ನೀಡಲು ವೈದ್ಯರು ಮುಂದಾಗಿದ್ದಾರೆ. ಪುನೀತ್ ಅವರ ಕಣ್ಣುಗಳು ಆರೋಗ್ಯವಾಗಿರುವುದರಿಂದ ಸ್ಟೆಮ್ ಸೆಲ್ಸ್ ಗಳನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ.
ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯ ಯೋಜಿಸಿದೆ. ಸ್ಟೆಮ್ ಸೆಲ್ಗಳಿಂದ ಪಟಾಕಿ ಅಥವಾ ಇನ್ನಿತರ ಅಪಘಾತಗಳಲ್ಲಿ ಕಣ್ಣಿಗೆ ಹಾನಿಯಾದವರಿಗೆ ಮರುದೃಷ್ಟಿ ನೀಡಬಹುದಾಗಿದೆ.