ಕರ್ನಾಟಕ

karnataka

ETV Bharat / sitara

‘ನಾನು ಅವನಲ್ಲ ಅವಳು’ ಸಿನಿಮಾ YouTubeನಲ್ಲಿ ವೀಕ್ಷಣೆಗೆ ಲಭ್ಯ - National Film Award winning kananda movies

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅಭಿನಯದ ‘ನಾನು ಅವನಲ್ಲ ಅವಳು’ ಚಿತ್ರವನ್ನು YouTube​ ಚಾನಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ.

Nanu Avanalla Avalu Full Movie in Youtube
‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಸಂಚಾರಿ ವಿಜಯ್

By

Published : Jun 18, 2021, 10:51 AM IST

ಕನ್ನಡದ ಕೆಲವು ಚಿತ್ರಗಳು ಅದೆಷ್ಟೇ ಜನಮನ್ನಣೆ ಪಡೆದರೂ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅದೆಷ್ಟೇ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರೂ, ಅದನ್ನು ನೋಡುವ ಭಾಗ್ಯ ಕನ್ನಡಿಗರಿಗಿರುವುದಿಲ್ಲ. ಏಕೆಂದರೆ, ಚಿತ್ರಮಂದಿರಗಳಲ್ಲಿ ಆ ಚಿತ್ರಗಳು ಬಹುದಿನಗಳ ವರೆಗೆ ಇರುವುದಿಲ್ಲ.

ಆ ಚಿತ್ರಗಳು ಟಿವಿ ಚಾನಲ್​ಳಗಲ್ಲೂ ಪ್ರಸಾರವಾಗುವುದಿಲ್ಲ. ಹಾಗಾಗಿ, ಕನ್ನಡದ ಅದೆಷ್ಟೋ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು ನೋಡುವುದಕ್ಕೇ ಸಿಗುವುದಿಲ್ಲ.

‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಸಂಚಾರಿ ವಿಜಯ್

ಆ ಸಾಲಿನಲ್ಲಿ ಸಂಚಾರಿ ವಿಜಯ್ ಅಭಿನಯದ ಮತ್ತು ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರ ಸಹ ಒಂದಾಗಿದೆ. ಈ ಚಿತ್ರವು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಂಚಾರಿ ವಿಜಯ್ ತಮ್ಮ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆದರೆ, ಆ ಚಿತ್ರವನ್ನು ಬಹಳಷ್ಟು ಜನ ನೋಡಿಲ್ಲ. ಏಕೆಂದರೆ, ಆ ಚಿತ್ರದ ಹಕ್ಕುಗಳನ್ನು ಯಾವುದೇ ಚಾನಲ್​ನವರು ಇದುವರೆಗೂ ಖರೀದಿಸಿಲ್ಲ.

ನಿರ್ದೇಶಕ ಲಿಂಗದೇವರು ಹೇಳಿಕೊಂಡಿರುವಂತೆ, ಆ ಚಿತ್ರವನ್ನು ಕೆಲವು ಚಾನಲ್​ಗಳಿಗೆ ತೋರಿಸುವ ಪ್ರಯತ್ನ ಮಾಡಲಾಯಿತಾದರೂ, ಸರಿಯಾಗಿ ಸ್ಪಂದಿಸಲಿಲ್ಲವಂತೆ. ಹಾಗಾಗಿ, ಚಿತ್ರದ ಹಕ್ಕುಗಳು ಇದುವರೆಗೂ ನಿರ್ಮಾಪಕ ರವಿ ಗರಣಿ ಅವರ ಹತ್ತಿರವೇ ಇದೆಯಂತೆ.

‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಸಂಚಾರಿ ವಿಜಯ್

ಇದೀಗ, ‘ನಾನು ಅವನಲ್ಲ ಅವಳು’ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸೋಮವಾರ, ಸಂಚಾರಿ ವಿಜಯ್ ಅವರ ನಿಧನದ ನಂತರ ಚಿತ್ರವನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಹಲವರು ಚಿತ್ರತಂಡಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರವನ್ನು 'ಸಿರಿ ಕನ್ನಡ' ಯೂಟ್ಯೂಬ್ ಚಾನಲ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಅಪ್​ಲೋಡ್​ ಆದ ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಸಂಚಾರಿ ವಿಜಯ್

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ಲಿಂಗದೇವರು, ಚಾನಲ್​ಗಳಲ್ಲಿ ಪ್ರಸಾರಕ್ಕೆ ಅವಕಾಶ ಸಿಗದಿದ್ದ ಸಂದರ್ಭದಲ್ಲಿ ನಿರ್ಮಾಪಕ ರವಿ ಗರಣಿ ಚಿತ್ರವನ್ನು ಯೂಟ್ಯೂಬ್​ನಲ್ಲಿ ಉಚಿತವಾಗಿ ಪ್ರದರ್ಶಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಚಿತ್ರವನ್ನು ಮಾಡಿದ್ದು ಹಣಕ್ಕಾಗಿ ಅಲ್ಲ, ಪ್ರೀತಿಗಾಗಿ. ಇಂತಹ ಸಂದರ್ಭದಲ್ಲಿ ವ್ಯವಹಾರ ಬೇಡ, ಒಂದೊಳ್ಳೆಯ ಚಿತ್ರ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಯೂಟ್ಯೂಬ್​ನಲ್ಲಿ ಎಲ್ಲರಿಗೂ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details