ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ. ಫೆಬ್ರವರಿಯಲ್ಲಿ ಆರಂಭಗೊಂಡ ಈ ಧಾರಾವಾಹಿಯು ಸೀರಿಯಲ್ ಪ್ರಿಯರ ಮನ ಸೆಳೆದಿದೆ ಎಂಬುದಕ್ಕೆ 200 ಸಂಚಿಕೆ ಪೂರೈಸಿರುವುದೇ ಸಾಕ್ಷಿ. ಪ್ರತಿ ಸಂಚಿಕೆಯೂ ಕುತೂಹಲಕಾರಿಯಾಗಿದ್ದು ವಿಭಿನ್ನ ಕಥಾ ಹಂದರದ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ನಾಯಕಿ ಇಂಚರಾ ಡಿಗ್ರಿ ಮುಗಿಸದಿದ್ದರೂ ಉದ್ಯೋಗ ಅರಸುತ್ತಿರುತ್ತಾಳೆ. ಆಶ್ಚರ್ಯ ಎಂಬಂತೆ ಅಗಸ್ತ್ಯ ಎಂಟರ್ ಪ್ರೈಸಸ್ ನಲ್ಲಿ ಆಕೆಗೆ ಕೆಲಸ ದೊರೆಯುತ್ತದೆ. ಸಂತೋಷ್ ರಾಥೋಡ್ ಅವರ ಪಿಎ ಆಗಿ ಇಂಚರಾ ಕೆಲಸ ಮಾಡುತ್ತಿರುತ್ತಾಳೆ. ಆದರೆ, ಅಲ್ಲಿ ಕೆಲಸ ಮುಂದುವರಿಸಲು ಇಂಚರಾಗೆ ಇಷ್ಟ ಇಲ್ಲದಿದ್ದರೂ ಸನ್ನಿವೇಶಗಳು ಅವಳನ್ನು ಒತ್ತಡಕ್ಕೆ ದೂಡುತ್ತದೆ. ಮುಂದೆ ರಿಷಭ್ ಜೊತೆ ಆಕೆಯ ಮದುವೆಯೂ ನಿಶ್ಚಯವಾಗುತ್ತದೆ. ರಿಷಭ್ ಕೆಟ್ಟವನು ಎಂದು ತಿಳಿದಿದ್ದರೂ ಅಮ್ಮನ ಆಸೆಯನ್ಬು ಈಡೇರಿಸುವ ಸಲುವಾಗಿ ಮದುವೆಗೆ ಸಿದ್ಧಳಾಗಿರುತ್ತಾಳೆ. ರಿಷಭ್ ನನ್ನು ವರಿಸಬೇಕಾಗಿದ್ದ ಇಂಚರಾಳಿಗೆ ಅಗಸ್ತ್ಯ ತಾಳಿ ಕಟ್ಟುತ್ತಾನೆ. ಹೀಗಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತದೆ.