ಕರ್ನಾಟಕ

karnataka

ETV Bharat / sitara

ಪರಭಾಷಾ ಚಿತ್ರಗಳ ಎದುರು ಗೆದ್ದ 'ನನ್ನ ಪ್ರಕಾರ'... ಸಿನಿಪ್ರಿಯರಿಗೆ ಧನ್ಯವಾದ ಹೇಳಿದ ಚಿತ್ರತಂಡ

ಆಗಸ್ಟ್ 23ರಂದು ಬಿಡುಗಡೆಯಾದ ಪ್ರಿಯಾಮಣಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನನ್ನ ಪ್ರಕಾರ' ಸಿನಿಮಾ ಗೆದ್ದಿದೆ. 'ಸಾಹೋ' ಅಬ್ಬರದ ನಡುವೆಯೂ ತಮ್ಮ ಚಿತ್ರ ಯಶಸ್ವಿಯಾಗಿರುವುದಕ್ಕೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.

ನನ್ನ ಪ್ರಕಾರ ಚಿತ್ರತಂಡ

By

Published : Sep 4, 2019, 11:36 AM IST

ಕಮರ್ಷಿಯಲ್ ವಿಚಾರದಲ್ಲಿ ಪರಭಾಷಾ ಚಿತ್ರಗಳು ಎಷ್ಟೇ ಸವಾಲು ಒಡ್ಡಿದರೂ ಕೂಡಾ ಕನ್ನಡ ಚಿತ್ರಗಳು ಅದರ ವಿರುದ್ಧ ಹೋರಾಡಿ ಗೆಲ್ಲುತ್ತವೆ ಎಂಬ ಉದಾಹರಣೆಗಳು ಸಾಕಷ್ಟಿವೆ. ಈಗ ಇವುಗಳ ಸಾಲಿಗೆ ವಿನಯ್ ಬಾಲಾಜಿ ನಿರ್ದೇಶನದ ಬಹುಭಾಷಾ ನಟ ಕಿಶೋರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ ನಟಿಸಿರುವ ನನ್ನ ಪ್ರಕಾರ ಚಿತ್ರವೂ ಸೇರಿದೆ.

'ನನ್ನ ಪ್ರಕಾರ' ಸಕ್ಸಸ್ ಮೀಟ್

ದೊಡ್ಡ ಬಜೆಟ್ ಹಾಗೂ ಸ್ಟಾರ್​​​​​ಗಳು ನಟಿಸಿರುವ 'ಸಾಹೋ' ಹಾಗೂ 'ಕುರುಕ್ಷೇತ್ರ' ಸಿನಿಮಾಗಳ ಅಬ್ಬರದ ನಡುವೆಯೂ ಆಗಸ್ಟ್ 23ರಂದು ಬಿಡುಗಡೆಯಾದ 'ನನ್ನ ಪ್ರಕಾರ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ 'ಸಾಹೋ' ಕಾರಣ ಮಲ್ಟಿಪ್ಲೆಕ್ಸ್​​​​ನಿಂದ ಕಾಣೆಯಾಗಿದ್ದ 'ನನ್ನ ಪ್ರಕಾರ' ಮತ್ತೆ ಮಲ್ಟಿಪ್ಲೆಕ್ಸ್​​​​ನಲ್ಲಿ ರಾರಾಜಿಸುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ನಿನ್ನೆ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಮುಂದೆ ಸಂತಸವನ್ನು ಹಂಚಿಕೊಂಡಿತು. ಸದ್ಯಕ್ಕೆ ಈ ಸಿನಿಮಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಹೌಸ್​​ಫುಲ್​​ ಪ್ರದರ್ಶನ ಕಾಣುತ್ತಿದೆ. ನಮ್ಮ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ಮಾತುಕತೆ ನಡೆದಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಾಯಕರಾಗಿ ನಟಿಸುವ ಸಾಧ್ಯತೆ ಇದೆ. ಇದರ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳಿಗೆ ಡಬ್ಬಿಂಗ್ ರೈಟ್ಸ್ ಸಹ ಸೇಲ್ ಆಗಿದೆ ಎಂದು ನಿರ್ದೇಶಕ ವಿನಯ್ ಬಾಲಾಜಿ ಸಂತಸವನ್ನು ಹಂಚಿಕೊಂಡರು.

ನಿರ್ದೇಶಕ ವಿನಯ್ ಬಾಲಾಜಿ

ಈಗಾಗಲೇ ಚಿತ್ರದ ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಪಡೆದಿದ್ದಾರೆ. ಪರಭಾಷಾ ಚಿತ್ರಗಳ ಹಾವಳಿ ಇದ್ದರೂ ಕೂಡಾ ಕನ್ನಡದಲ್ಲಿ ಒಳ್ಳೆ ಕಥೆಯನ್ನು ಕನ್ನಡಿಗರು ಇದುವರೆಗೂ ಕೈ ಬಿಟ್ಟಿಲ್ಲ. ಅದರಲ್ಲೂ ಹೊಸಬರ ಚಿತ್ರಗಳನ್ನು ಸಿನಿಪ್ರಿಯರು ಕೈ ಹಿಡಿಯುತ್ತಲೇ ಬಂದಿದ್ದಾರೆ ಎಂಬುದಕ್ಕೆ ನಮ್ಮ ಚಿತ್ರವೇ ಉದಾಹರಣೆ ಎಂದು ಇಡೀ ಚಿತ್ರತಂಡ ಕನ್ನಡ ಸಿನಿಪ್ರಿಯರಿಗೆ ಧನ್ಯವಾದ ಅರ್ಪಿಸಿತು. ಜೊತೆಗೆ ಚಿತ್ರದ ಸಕ್ಸಸ್​​​​​​​​​​​​​​​ನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಧ್ಯಮದವರಿಗೂ ಧನ್ಯವಾದ ಅರ್ಪಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಕೆಲವೊಂದು ಚಿತ್ರಗಳು ಥಿಯೇಟರ್​​​ನಲ್ಲಿಮೂರು ದಿನಗಳಿಗಿಂತ ಹೆಚ್ಚಿಗೆ ಇರುವುದಿಲ್ಲ. ಅಂತದ್ದರಲ್ಲಿ ನಮ್ಮ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ನಟ ಕಿಶೋರ್ ಕೂಡಾ ಸಿನಿಪ್ರಿಯರಿಗೆ ಕೃತಜ್ಞತೆ ಅರ್ಪಿಸಿದರು.

ಕಿಶೋರ್, ಮಯೂರಿ

ABOUT THE AUTHOR

...view details