ಕರ್ನಾಟಕ

karnataka

ETV Bharat / sitara

'ನನ್ನ ಪ್ರಕಾರ' ಮೋಷನ್ ಪಿಕ್ಚರ್​ ರಿಲೀಸ್ - undefined

ವಿಭಿನ್ನ ಶೀರ್ಷಿಕೆಯಿಂದ ಸ್ಯಾಂಡಲ್​​ವುಡ್​​ನಲ್ಲಿ ಗಮನ ಸೆಳೆಯುತ್ತಿರುವ 'ನನ್ನ ಪ್ರಕಾರ' ಸಿನಿಮಾದ ಮೋಷನ್ ಪಿಕ್ಚರ್​ ರಿಲೀಸ್ ಆಗಿದೆ.

ನನ್ನ ಪ್ರಕಾರ

By

Published : Jun 28, 2019, 10:54 AM IST

Updated : Jun 28, 2019, 11:13 AM IST

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ 'ನನ್ನ ಪ್ರಕಾರ' ಚಿತ್ರದಲ್ಲಿ ಬಹುಭಾಷಾ ನಟ ಕಿಶೋರ್​ ಇಂಟೆಲಿಜೆನ್ಸ್‌ ಕಾಫ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ, ಡಾಕ್ಟರ್ ಕ್ಯಾರೆಕ್ಟರ್ ಪ್ಲೇ ಮಾಡ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಮೋಷನ್ ಪಿಕ್ಚರ್ ಥ್ರಿಲ್ಲಿಂಗ್ ಜೊತೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯಿಂದ ಕೂಡಿದೆ.

ಮಾಧ್ಯಮಿಗೋಷ್ಟಿಯಲ್ಲಿ 'ನನ್ನ ಪ್ರಕಾರ' ಚಿತ್ರತಂಡ

ನಾಲ್ಕು ಕಥೆಗಳನ್ನೊಳಗೊಂಡಿರುವ 'ನನ್ನ ಪ್ರಕಾರ' ಚಿತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಅನ್ನೋದು ಚಿತ್ರತಂಡದ ಮಾತು. ಗ್ರಾಫಿಕ್ಸ್ ಡಿಸೈನರ್ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ವಿನಯ್ ಬಾಲಾಜಿ,‌ ಕಥೆ ಚಿತ್ರಕತೆ ಬರೆದು ಫಸ್ಟ್ ಟೈಮ್‌ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮ್ ಸಂಗೀತ ನೀಡಿದ್ದು, ಅದ್ದೂರಿಯಾಗಿ ನಿರ್ಮಾಪಕ ಗುರುರಾಜ್ ನಿರ್ಮಾಣ ಮಾಡಿದ್ದಾರೆ. ಮಯೂರಿ, ಅರ್ಜುನ್, ನಿರಂಜನ್ ದೇಶಪಾಂಡೆ, ಅಶೋಕ್ ಹಾಗೂ ವೈಷ್ಟವಿ ಹೀಗೆ ದೊಡ್ಡ ತಾರ ಬಳಗವಿರುವ 'ನನ್ನ ಪ್ರಕಾರ' ಸಿನಿಮಾ ಮುಂದಿನ ತಿಂಗಳು ತೆರೆ ಮೇಲೆ‌ ಬರಲಿದೆ.

Last Updated : Jun 28, 2019, 11:13 AM IST

For All Latest Updates

TAGGED:

ABOUT THE AUTHOR

...view details