ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಹಿಟ್ ಆಗಿರುವ ಚಿತ್ರಗಳ ಹೆಸರನ್ನು ಮತ್ತೆ ಬಳಸಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅಲ್ಲದೆ ಅವುಗಳಲ್ಲಿ ಕೆಲವು ಚಿತ್ರಗಳು ಯಶಸ್ವಿಯಾಗಿವೆ. ಈಗ ಇವುಗಳ ಸಾಲಿಗೆ "ನಾನೇ ರಾಜ "ಎಂಬ ಚಿತ್ರ ಎಂಟ್ರಿಯಾಗಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾನೇ ರಾಜ ಎಂಬ ಟೈಟಲ್ ನಲ್ಲಿ ಸಿನಿಮಾ ರೆಡಿಯಾಗಿದೆ. ವಿಶೇಷ ಅಂದ್ರೆ "ನಾನೇ ರಾಜ" ಚಿತ್ರದಲ್ಲಿ ನಾಯಕನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಎರಡನೇ ತಮ್ಮ ಉಮೇಶ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದಲ್ಲದೆ ಈಗಾಗಲೇ ನಾನೇ ರಾಜ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂದು ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ಹಾಗೂ ಟೀಸರ್ ಅನ್ನು ಲಾಂಚ್ ಮಾಡಿತ್ತು.
ಬೆಂಗಳೂರಿನ ಎಸ್ ಆರ್ ವಿ ಥೇಟರ್ ನಲ್ಲಿ ನಡೆದ ಟೈಟಲ್ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಭಾರ್ಗವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಕಾರ್ಯದರ್ಶಿಗಳಾದ ಎನ್ಎಮ್ ಸುರೇಶ್ ಹಾಗೂ ಮಾಜಿ ಕಾರ್ಯದರ್ಶಿಗಳಾದ ಭಾಮ ಹರೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಅಲ್ಲದೆ ಉಮೇಶ್ ನಾನೇ ರಾಜ ಚಿತ್ರಕ್ಕಾಗಿ ರಾಜಕೃಷ್ಣ ಎಂದು ಹೆಸರನ್ನು ಕೂಡ ಬದಲಾಯಿಸಿಕೊಂಡು ಪಕ್ಕ ಮಾಸ್ ಹೀರೋ ಹಾಗೆ ನಾನೇ ರಾಜ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ರೆಡಿಯಾಗುತ್ತಿದ್ದಾರೆ.
ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚಿತ್ರವನ್ನು ವರಪ್ರದ ಪ್ರೊಡಕ್ಷನ್ ಬ್ಯಾನರ್ ನಡಿ ಆನಂದ್ ಚಿತ್ರವನ್ನು ನಿರ್ಮಾಣ ಮಾಡಿದೆ. ಇನ್ನು ಚಿತ್ರದಲ್ಲಿ ಬಹುದೊಡ್ಡ ತಾರಾ ಬಳಗವೇ ಇದ್ದು ಖಳನಟ ಡ್ಯಾನಿ ಕುಟ್ಟಪ್ಪ, ಕುರಿ ಪ್ರತಾಪ್, ಹಿರಿಯ ನಟ ಉಮೇಶ್, ಚಂದ್ರಪ್ರಭ, ಮೋಹನ್ ಜುನೇಜ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ.