ನಂದಿತ ಶ್ವೇತ ನಿಮಗೆಲ್ಲಾ ಗೊತ್ತು. ಯೋಗೀಶ್ ಜೊತೆ 'ನಂದ ಲವ್ಸ್ ನಂದಿತ' ಚಿತ್ರದಲ್ಲಿ ನಟಿಸಿದ್ದ ಬ್ಯೂಟಿ. ಈ ಬೆಂಗಳೂರಿನ ಹುಡುಗಿಗೆ ನಂತರ ತಮಿಳಿನಲ್ಲಿ ಅವಕಾಶ ದೊರೆತಿದ್ದರಿಂದ ಚೆನ್ನೈಗೆ ಹಾರಿದ್ರು. ಇದಾದ ನಂತರ ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದರು.
ಖ್ಯಾತ ನಟಿಯ ಸಿನಿಮಾಗೆ ಮೂರು ಭಾಷೆಗಳಲ್ಲಿ ಧ್ವನಿ ನೀಡಿದ ಜಿಂಕೆಮರಿ - ದಬಾಂಗ್ 3 ಚಿತ್ರಕ್ಕೆ ನಂದಿತಾ ಶ್ವೇತ ಧ್ವನಿ
'ದಬಾಂಗ್ -3' ಚಿತ್ರದ ಸೋನಾಕ್ಷಿ ಸಿನ್ಹ ಅವರ ಪಾತ್ರಕ್ಕೆ ಶ್ವೇತ ಡಬ್ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ ಭಾಷೆಯ ವರ್ಷನ್ಗೆ ಧ್ವನಿ ನೀಡಿದ್ದಾರೆ. ಶ್ವೇತ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
![ಖ್ಯಾತ ನಟಿಯ ಸಿನಿಮಾಗೆ ಮೂರು ಭಾಷೆಗಳಲ್ಲಿ ಧ್ವನಿ ನೀಡಿದ ಜಿಂಕೆಮರಿ Nandita Swetha Dub for Sonkashi sinha](https://etvbharatimages.akamaized.net/etvbharat/prod-images/768-512-5407770-thumbnail-3x2-nandita.jpg)
ಇದೀಗ ನಂದಿತ ಶ್ವೇತ ಕನ್ನಡಕ್ಕಿಂತ ತೆಲುಗು, ತಮಿಳು ಚಿತ್ರಪ್ರೇಮಿಗಳಿಗೆ ಹೆಚ್ಚು ಪರಿಚಯ. ಸದ್ಯಕ್ಕೆ ತೆಲುಗು, ಕನ್ನಡ, ತಮಿಳು ಸೇರಿ ಸುಮಾರು 4-5 ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಇನ್ನು, ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿರುವ ಸಲ್ಮಾನ್ ಖಾನ್ ಹಾಗೂ ಸುದೀಪ್ ಅಭಿನಯದ 'ದಬಾಂಗ್ -3' ಚಿತ್ರದ ಸೋನಾಕ್ಷಿ ಸಿನ್ಹ ಅವರ ಪಾತ್ರಕ್ಕೆ ಶ್ವೇತ ಡಬ್ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ ಭಾಷೆಯ ವರ್ಷನ್ಗೆ ಧ್ವನಿ ನೀಡಿದ್ದಾರೆ. ಶ್ವೇತ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸೋನಾಕ್ಷಿ ಅವರಂತ ನಟಿಗೆ ಧ್ವನಿ ನೀಡಿದ್ದಕ್ಕೆ ನನಗೆ ಖುಷಿ ಆಗುತ್ತಿದೆ. ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.