ಕಳೆದ ವರ್ಷ ಆಗಸ್ಟ್ 29 ರಂದು ಟಿಡಿಪಿ ಹಿರಿಯ ನಾಯಕ, ನಟ, ನಿರ್ಮಾಪಕ ನಂದಮೂರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಜ್ಯೂ. ಎನ್ಟಿಆರ್ ತಂದೆ ಹರಿಕೃಷ್ಣ ಮೊದಲ ವರ್ಷದ ಪುಣ್ಯತಿಥಿಯನ್ನು ಕುಟುಂಬ ವರ್ಗ ಇಂದು ಆಚರಿಸಿದೆ.
ಇಂದು ನಂದಮೂರಿ ಹರಿಕೃಷ್ಣ ಮೊದಲ ವರ್ಷದ ಪುಣ್ಯತಿಥಿ - ಚಂದ್ರಬಾಬು ನಾಯ್ಡು
ನಟ ಜ್ಯೂ. ಎನ್ಟಿಆರ್ ತಂದೆ ನಂದಮೂರಿ ಹರಿಕೃಷ್ಣ ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಇಂದು ಕುಟುಂಬವರ್ಗ ಹೈದರಾಬಾದ್ನ ಹರಿಕೃಷ್ಣ ನಿವಾಸದಲ್ಲಿ ಆಚರಿಸಿದೆ. ಕಳೆದ ವರ್ಷ ಆಗಸ್ಟ್ 29 ರಂದು ಹರಿಕೃಷ್ಣ ನಲ್ಗೊಂಡ ಜಿಲ್ಲೆಯ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಹರಿಕೃಷ್ಣ ನಿವಾಸದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿದ್ದು ಹರಿಕೃಷ್ಣ ಪುತ್ರರಾದ ಜ್ಯೂ. ಎನ್ಟಿಆರ್, ಕಲ್ಯಾಣ್ ರಾಮ್, ಕುಟುಂಬ ವರ್ಗ, ಟಿಡಿಪಿ ಪ್ರಮುಖ ನಾಯಕ ಚಂದ್ರಬಾಬು ನಾಯ್ಡು ಹಾಗೂ ಇನ್ನಿತರರು ಪ್ರಮುಖರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹರಿಕೃಷ್ಣ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಹರಿಕೃಷ್ಣ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಹಿರಿಯ ಪುತ್ರ. ಶ್ರೀ ಕೃಷ್ಣಾವತಾರಂ, ರಾಮ್ ರಹೀಮ್, ದಾನ ವೀರ ಶೂರ ಕರ್ಣ, ಸೀತಯ್ಯ ಸೇರಿ ಸುಮಾರು 12 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ನಂತರ ನಟನೆಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಅವರು ಸಕ್ರಿಯರಾಗಿದ್ದರು. 1996 ರಲ್ಲಿ ಆಂಧ್ರ ಸಾರಿಗೆ ಸಚಿವರಾಗಿಯೂ ಅವರ ಕಾರ್ಯ ನಿರ್ವಹಿಸಿದ್ದರು.