ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜುಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಪಡ್ಡೆ ಹುಲಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ಶ್ರೇಯಸ್ ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ತಿಳಿದುಬಂದಿದೆ.
ವಿ.ಕೆ.ಪ್ರಕಾಶ್ ನಿರ್ದೇಶನದ 'ವಿಷ್ಣುಪ್ರಿಯ' ಸಿನಿಮಾ ಶ್ರೇಯಸ್ ಅಭಿನಯದ ಎರಡನೇ ಚಿತ್ರವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ ಶ್ರೇಯಸ್ ಅಭಿನಯದ ಹೊಸ ಚಿತ್ರವೊಂದು ಘೋಷಣೆಯಾಗಿದೆ. ಪೊಗರು ಚಿತ್ರದ ಬಳಿಕ ಸಿಕ್ಕಾಪಟ್ಟೆ ಡಿಮ್ಯಾಂಡ್ನಲ್ಲಿರುವ ನಂದ ಕಿಶೋರ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ಈ ಹಿಂದೆ ಟಗರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದ ಗುಜ್ಜಾಲ್ ಪುರುಷೋತ್ತಮ್ ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಧರ್ಮವಿಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆಗಳನ್ನು ಬರೆಯಲಿದ್ದಾರೆ.
ಈ ಸಿನಿಮಾ ಆರಂಭವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಯಾಕೆಂದರೆ, ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರ ಮುಗಿಯಬೇಕು. ಆ ನಂತರ ಶಿವರಾಜ್ಕುಮಾರ್ ಅಭಿನಯದಲ್ಲಿ ನಂದ ಕಿಶೋರ್ ಒಂದು ಚಿತ್ರವನ್ನು ನಿರ್ದೇಶಿಸುತ್ತಾರೆ. ಆ ನಂತರ ಶ್ರೇಯಸ್ ಮಂಜು ಚಿತ್ರ ಪ್ರಾರಂಭವಾಗಲಿದೆ. ಶ್ರೇಯಸ್ ಮಂಜು ಸಹ ಮಲಯಾಳಂನಲ್ಲಿ ಒಂದೆರೆಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಆ ಚಿತ್ರಗಳನ್ನು ಮುಗಿಸಿ ಬರಲಿದ್ದಾರೆ. ಚಿತ್ರದ ಹೆಸರೇನು, ಯಾರೆಲ್ಲಾ ನಟಿಸುತ್ತಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇದನ್ನೂ ಓದಿ:ಸಿಎಂ ಮನವೊಲಿಸಿದ ಅಪ್ಪು: ಏಪ್ರಿಲ್ನಲ್ಲಿ ಈ ಸಿನಿಮಾಗಳು ಬಿಡುಗಡೆಯಾಗೋದು ಡೌಟು