ಸ್ಯಾಂಡಲ್ವುಡ್ನಲ್ಲಿ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಇದೀಗ ಮೈಸೂರಿನ ಟೀಂವೊಂದು ಟೆಂಪರ್ ಎಂಬ ಸಿನಿಮಾ ಶುರು ಮಾಡಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ನೇರವೇರಿಸಿತು. ಈ ಚಿತ್ರತಂಡಕ್ಕೆ ಹ್ಯಾಟ್ರಿಕ್ ಡೈರೆಕ್ಟರ್ ನಂದ ಕಿಶೋರ್ ಕ್ಲಾಪ್ ಮಾಡಿ ಶುಭ ಕೋರಿದ್ರು.
ಇನ್ನು ಟೆಂಪರ್ ಸಿನಿಮಾದ ಮೂಲಕ ಆರ್ಯನ್ ಸೂರ್ಯ ಎಂಬ ಹೊಸ ಹೀರೋ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಆರ್ಯನ್ ಮೊದಲ ಸಿನಿಮಾದ ಮೂಲಕವೇ ರಗಡ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಟೆಂಪರ್ ಹೀರೋಗೆ ಜೋಡಿಯಾಗಿ ನಟಿ ಕಾಶಿಮಾ ಜೊತೆಯಾಗಿದ್ದು, ಈಗಾಗಲೇ ತಮಿಳಿನ ಒಂದು ಸಿನಿಮಾದಲ್ಲಿ ಇವರು ನಟಿಸಿದ್ದಾರೆ.