ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ತಮ್ಮ ಮಗನ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ 'ಶೌರ್ಯ ವಡೆಯರ್' ಎಂದು ಹೆಸರಿಟ್ಟಿದ್ದಾರೆ ಈ ಜೋಡಿ.
ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಕ್ಯೂಟ್ ಚಿತ್ರಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ. ಹಾಗೆಯೇ ಮಗನನ್ನು ಇನ್ಮುಂದೆ ಶೌರ್ಯ ವಡೆಯರ್ ಎಂದು ಕರೆಯುತ್ತಾರೆ.
ಯುವ ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬದ ದಿನದಂದೆ ತಮ್ಮ ಮಗ ಹುಟ್ಟಿದ ಖುಷಿ ಅವರಿಗೆ. ಪವನ್ ಹಾಗೂ ಅಪೇಕ್ಷಾ ಮಗು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು. ನಂತರ ಅಂದು ಸಂಜೆಯೇ ಮಗುವಿನ ಮೊದಲ ಚಿತ್ರವನ್ನೂ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಮಗುವಿಗೆ ಒಂದು ಬಿಳಿ ಬಣ್ಣದ ಟೀ-ಶರ್ಟ್ ತೊಡಿಸಿದ್ದು, ಅದರ ಮೇಲೆ ಹ್ಯಾಪಿ ಬರ್ತ್ ಡೇ ಡ್ಯಾಡಿ ಎಂದು ಬರೆಯಲಾಗಿತ್ತು. ಜೊತೆಗೆ ಐ ಆ್ಯಮ್ ದ ಬೆಸ್ಟ್ ಗಿಫ್ಟ್ ಎವರ್ ಎಂದು ಪ್ರಿಂಟ್ ಮಾಡಲಾಗಿತ್ತು. ಈಗ ಈ ಜೋಡಿ ತಮ್ಮ ಮುದ್ದಿನ ಮಗನ ಹೆಸರನ್ನು ಬಹಿರಂಗಪಡಿಸಿದೆ.
ಪವನ್ ಒಡೆಯರ್ ಮಗನಿಗೆ ನಾಮಕರಣ