ಕರ್ನಾಟಕ

karnataka

ETV Bharat / sitara

''ಆಯುಷ್ಮಾನ್ ಭವ''ನೋಡಿ ಆಮೇಲೆ ನಮ್ಮ ಸಿನಿಮಾ ನೋಡಿ ಅಂತಿದ್ದಾರೆ ''ನಮ್ ಗಣಿ'' - nam gani bcom pass movie team press meet

'ನಮ್ ಗಣಿ ಬಿಕಾಂ ಪಾಸ್' ಎಂಬ ಶೀರ್ಷಿಕೆಯಡಿ ಸ್ಯಾಂಡಲ್​​​ವುಡ್​​ನಲ್ಲಿ ವಿಭಿನ್ನ ಸಿನಿಮಾವೊಂದು ರಿಲೀಸ್​ ಆಗ್ತಿದ್ದು,ಈ ಕುರಿತು ಚಿತ್ರತಂಡ ಪ್ರೆಸ್​​ಮೇಟ್​​ ಮಾಡಿದೆ.

'ನಮ್ ಗಣಿ ಬಿಕಾಂ ಪಾಸ್'

By

Published : Nov 11, 2019, 11:34 PM IST

ಬೆಂಗಳೂರು :'ನಮ್ ಗಣಿ ಬಿಕಾಂ ಪಾಸ್' ಸ್ಯಾಂಡಲ್​​​ವುಡ್​​ನಲ್ಲಿ ವಿಭಿನ್ನ ಟೈಟಲ್​​ನೊಂದಿಗೆ ರಿಲೀಸ್​​ಗೆ ಸಜ್ಜಾಗಿರೋ ಚಿತ್ರ, ಟ್ರೇಲರ್​ ಹಾಗು ಹಾಡುಗಳಿಂದ ಸದ್ದು ಮಾಡುತ್ತಿದೆ.

ಇದೇ ತಿಂಗಳು 15ಕ್ಕೆ ಪ್ರೇಕ್ಷಕರ ಮುಂದೆ ಬರೋದಿಕ್ಕೆ ರೆಡಿಯಾಗಿರೋ, ನಮ್ ಗಣಿ ಚಿತ್ರಕ್ಕೆ ಸಂಕಟವೊಂದು ಎದುರಾಗಿದೆ. ಈ ಬಗ್ಗೆ ಮಾತನಾಡೋದಿಕ್ಕೆ ಪ್ರೆಸ್​​ಮೀಟ್​​ ಕರೆಯಲಾಗಿತ್ತು.ನಿರ್ದೇಶಕ ಕಮ್ ಹೀರೋ ಅಭಿಷೇಕ್ ಶೆಟ್ಟಿ, ನಿರ್ಮಾಪಕ ನಾಗೇಶ್ ಕುಮಾರ್ ಯು ಎಸ್, ನಟಿಯರಾದ ಐಶಾನಿ ಶೆಟ್ಟಿ, ರಚನಾ, ತಮ್ಮ ಚಿತ್ರದ ಸ್ಪೆಷಾಲಿಟಿ ಬಗ್ಗೆ ಹಂಚಿಕೊಳ್ಳುವ ಜೊತೆಗೆ ಎದುರಾಗಿರುವ ಸಂಕಷ್ಟದ ಬಗ್ಗೆ ಬಿಚ್ಚಿಟ್ಟಿದ್ದಾರೆ.

'ನಮ್ ಗಣಿ ಬಿಕಾಂ ಪಾಸ್'

ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಚಿತ್ರದ ನವೆಂಬರ್ 1ಕ್ಕೆ ರಿಲೀಸ್ ಆಗುತ್ತೆ ಅಂತಾ ನಮ್ ಗಣಿ ಬಿಕಾಂ‌ ಪಾಸ್ ಚಿತ್ರ ನವೆಂಬರ್ 15ಕ್ಕೆ ರಿಲೀಸ್ ಡೇಟ್ ನ್ನ ಅನೌಸ್ ಮಾಡಿತ್ತು..ಆದ್ರೆ ಶಿವರಾಜ್ ಕುಮಾರ್ ಆಯುಷ್ಮಾನ್ ಭವ ಚಿತ್ರ 15ಕ್ಕೆ ರಿಲೀಸ್ ಆಗ್ತಾ ಇರೋದು, ಈ ಚಿತ್ರಕ್ಕೆ ಹೊಡೆತ ಬೀಳ್ತಾ ಇದೆ..ಹೀಗಾಗಿ ಚಿತ್ರದ ನಿರ್ಮಾಪಕ ನಾಗೇಶ್ ಕುಮಾರ್, ನಾವು ರಾಜಕುಮಾರ್ ಹಾಗು ಶಿವರಾಜ್ ಕುಮಾರ್ ಅಭಿಮಾನಿಗಳು, ಆದ್ರೆ ಶಿವರಾಜ್ ಕುಮಾರ್ ಫ್ಯಾನ್ಸ್, ಮೊದಲು ಆಯುಷ್ಮಾನ್ ಭವ ಸಿನಿಮಾ ನೋಡಿ, ಆಮೇಲೆ ನಮ್ ಗಣಿ ಬಿಕಾಂ‌ ಪಾಸ್ ಸಿನಿಮಾ ನೋಡಿ ಅಂತಾ ಮನವಿ ಮಾಡಿಕೊಂಡಿದೆ.

ಚಿತ್ರದಲ್ಲಿ ಐಶಾನಿ ಎರಡು ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ..ಪಲ್ಲವಿ ಗೌಡ, ರಚನಾ ದಶರಥ್, ಸುಚೇಂದ್ರ ಪ್ರಸಾದ್, ಶಂಕರ್ ಅಶ್ವತ್ಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಈ ಸಿನಿಮಾಗೆ ವಿಕಾಸ್ ವಸಿಷ್ಠ ಸಂಗೀತವಿದ್ದು, ಸಮರ್ಥ ನಾಗರಾಜ್ ಕ್ಯಾಮರಾ ವರ್ಕ್ ಮಾಡಿದ್ದಾರೆ.ಸದ್ಯ ಆಯುಷ್ಮಾನ್ ಭವ ಸಿನಿಮಾ 200ರಕ್ಕೂ ಹೆಚ್ಚ ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಾ ಇದ್ದು, ನಮ್ ಗಣಿ ಬಿಕಾಂ ಪಾಸ್ ಚಿತ್ರ ಕೇವಲ ಐದು ಜಿಲ್ಲೆಗಳಲ್ಲಿ ರಿಲೀಸ್ ಆಗ್ತಾ ಇದೆ.

ABOUT THE AUTHOR

...view details