ಸ್ಯಾಂಡಲ್ ವುಡ್ನಲ್ಲಿ ಸದ್ಯ ಫಾರ್ಮ್ನಲ್ಲಿರುವ ಸ್ಟಾರ್ಗಳ ಪೈಕಿ ಕಿಚ್ಚ ಸುದೀಪ್ ಒಬ್ಬರು. ಇದೀಗ 'ಪೈಲ್ವಾನ್' ಸಿನಿಮಾ ರಿಲೀಸ್ ಖುಷಿಯಲ್ಲಿರುವ ಸುದೀಪ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಅರ್ಥಪೂರ್ಣ ಹಾಡು ರಚಿಸಿದ್ದಾರೆ.
'ಕವಿರತ್ನ'ನಿಂದ ಕಿಚ್ಚನ ಗುಣಗಾನ: ಸುದೀಪ್‌ಗಾಗಿ ಹಾಡು ಬರೆದ ನಾಗೇಂದ್ರ ಪ್ರಸಾದ್ - ಸಂಗೀತ ನಿರ್ದೇಶಕ ವಿ. ನಾಗೇಂದ್ರ
ಸುದೀಪ್ ವರ್ಣಣೆಯ ಹಾಡು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಸಂಗೀತ ನಿರ್ದೇಶಕ, ಕವಿರತ್ನ ಎಂದೇ ಕರೆಸಿಕೊಂಡಿರುವ ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.
ಸುದೀಪನಿಗಾಗಿಯೇ ಹಾಡು ಬರೆದ ನಾಗೇಂದ್ರ ಪ್ರಸಾದ್...!
ಈ ಮಧ್ಯೆ ಸುದೀಪ್ ಅವರ ಮೇಲೊಂದು ಹಾಡು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಈ ಪದ್ಯದಲ್ಲಿ ಕಿಚ್ಚನ ಗುಣಗಾನ ಮಾಡಲಾಗಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸುದೀಪ ಎಂದು ಶುರುವಾಗುವ ಹಾಡಿನಲ್ಲಿ ಅವರು ನಟಿಸಿರುವ ಕೆಲವು ಸಿನಿಮಾ ಹೆಸರುಗಳನ್ನೂ ಸೇರಿಸಲಾಗಿದೆ.