ಹಿರಿಯ ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಎಂದಿಗೂ ಶೀರ್ಷಿಕೆ ಇಲ್ಲದೆ ಚಿತ್ರೀಕರಣ ಪ್ರಾರಂಭ ಮಾಡಿರಲಿಲ್ಲ. ಇದೀಗ ಅವರು ಇನ್ನೊಂದು ಸಿನಿಮಾವನ್ನು ಮಾಡುತ್ತಿದ್ದು ಚಿತ್ರೀಕರಣ ಪೂರ್ತಿಗೊಳಿಸಿ ಶೀರ್ಷಿಕೆ ಕೂಡಾ ಅಂತಿಮಗೊಳಿಸಿದ್ದಾರೆ.
ನಾಗತಿಹಳ್ಳಿ ಸಿನಿಮಾಗೆ ಕ್ರಿಕೆಟ್ ತಂಡಗಳ ಶೀರ್ಷಿಕೆ - undefined
ಕನ್ನಡ ಮೇಷ್ಟ್ರು ಎಂದೇ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಸಿನಿಮಾಗೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಎಂಬ ಹೆಸರಿಟ್ಟಿದ್ದು ಸಿನಿಮಾದಲ್ಲಿ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಶ್ರೀಮಂತಿಕೆಯ ಕಥೆ ಇರಲಿದೆ ಎನ್ನಲಾಗಿದೆ.
‘ಅಮೆರಿಕ ಅಮೆರಿಕ’ ಶೀರ್ಷಿಕೆ ಇದ್ದಂತೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಶೀರ್ಷಿಕೆಯನ್ನು ತಮ್ಮ ಹೊಸ ಚಿತ್ರಕ್ಕೆ ಫೈನಲ್ ಮಾಡಿದ್ದಾರೆ. ಕನ್ನಡ ಮೇಷ್ಟ್ರು ಎಂದು ಕೂಡಾ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಈ ಹೊಸ ಸಿನಿಮಾಗೆ ಮತ್ತೆ ಆಂಗ್ಲ ಭಾಷೆಯಲ್ಲಿ ಶೀರ್ಷಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇಡೀ ಚಿತ್ರೀಕರಣ ಇಂಗ್ಲೆಂಡ್ನಲ್ಲಿ ನಡೆದಿರುವುದರಿಂದ ಶೀರ್ಷಿಕೆಗೆ ತಕರಾರು ಆಗುವ ಸಾಧ್ಯತೆ ಇಲ್ಲ. ಇದೇನಪ್ಪ ಇದು ಕ್ರಿಕೆಟ್ ಸಂಬಂಧಿತ ಸಿನಿಮಾನ ಎಂದು ಅನುಮಾನ ಬರುವುದು ಗ್ಯಾರಂಟಿ.
ಆದರೆ ನಾಗತಿಹಳ್ಳಿ ಅವರ ಕಥಾ ವಸ್ತು ಬೇರೆಯದೇ ಇದೆ. ಈ ಶೀರ್ಷಿಕೆ ಕ್ರಿಕೆಟ್ಗೆ ಸಂಬಂಧಿಸಿದ ಹಾಗೆ ಇದೆ. ಆದರೆ ಶೀರ್ಷಿಕೆ ಜೊತೆ ‘ಕ್ರಿಕೆಟ್ ಅಲ್ಲ’, ಎಂದು ಉಪ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಎರಡು ದೇಶಗಳ ನಡುವೆ ಇರುವ ಸಾಂಸ್ಕೃತಿಕ ಶ್ರೀಮಂತಿಕೆ ತೆರೆಯ ಮೇಲೆ ಲಭ್ಯವಾಗಲಿದೆ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕಾಗಿ ಒಂದೂವರೆ ತಿಂಗಳು ಲಂಡನಿನಲ್ಲಿ ಚಿತ್ರೀಕರಣ ಮಾಡಿದ್ದಾರೆ. ವಸಿಷ್ಠ ಎನ್ ಸಿಂಹ ಹಾಗೂ ಮಾನ್ವಿತಾ ಕಾಮತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಮೊದಲು ಲಂಡನಿನಲ್ಲೇ ಚಿತ್ರೀಕರಿಸಲಾಗುವುದು ಎನ್ನಲಾಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅರ್ಜುನ್ ಜನ್ಯಾ, ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು 'ಕನ್ನಡ ಕಲಿ' ಎಂಬ ಹಾಡು ಬಹಳ ವಿಶೇಷವಾಗಿದೆಯಂತೆ. ಸಂಸದೆ ಸುಮಲತಾ ಅಂಬರೀಶ್ ಹಾಗೂ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.