2013 ರಲ್ಲಿ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡ 'ಮೈನಾ' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದ್ದು ಕನ್ನಡದಲ್ಲಿ ಈ ಸಿನಿಮಾವನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರೇ ಹಿಂದಿಯಲ್ಲಿ ಕೂಡಾ ನಿರ್ದೇಶಿಸಲು ಹೊರಟಿದ್ದಾರೆ.
ಹಿಂದಿಗೆ ರೀಮೇಕ್ ಆಗುತ್ತಿದೆ 'ಮೈನಾ'...ನಿರ್ದೇಶನ ಮಾಡ್ತಿರೋದು ನಾಗಶೇಖರ್ - abhishek ambareesh
ನಿತ್ಯಾ ಮೆನನ್ ಹಾಗೂ ಚೇತನ್ ಕುಮಾರ್ ನಟಿಸಿದ್ದ 'ಮೈನಾ' ಸಿನಿಮಾ ಇದೀಗ 'ಕಲರ್ಫುಲ್' ಹೆಸರಿನಲ್ಲಿ ಹಿಂದಿಗೆ ರೀಮೇಕ್ ಆಗುತ್ತಿದ್ದು ಈ ಸಿನಿಮಾವನ್ನು ಕೂಡಾ ರಾಜಶೇಖರ್ ಅವರೇ ನಿರ್ದೇಶಿಸಲು ಹೊರಟಿದ್ದಾರೆ. ಚಿತ್ರದ ನಾಯಕ ಆಯ್ಕೆಯಾಗಿದ್ದು ನಾಯಕಿಯ ಹುಡುಕಾಟ ನಡೆಯುತ್ತಿದೆ.
'ಅರಮನೆ', 'ಸಂಜು ಮತ್ತು ಗೀತಾ' ಹಾಗೂ 'ಮೈನಾ' ಸಿನಿಮಾಗಳನ್ನು ನಿರ್ದೇಶಿಸಿ ಹ್ಯಾಟ್ರಿಕ್ ನಿರ್ದೇಶಕ ಎಂದು ಹೆಸರಾದವರು ರಾಜಶೇಖರ್. ಅವರು ನಿರ್ದೇಶಿಸಿದ ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಮತ್ತು ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆತರೂ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವ ಗಳಿಕೆ ಮಾಡಲಿಲ್ಲ. ಇದೀಗ ಅವರು ತಾವು 2013 ರಲ್ಲಿ ನಿರ್ದೇಶಿಸಿದ್ದ ಚೇತನ್ ಹಾಗೂ ನಿತ್ಯಾ ಮೆನನ್ ನಟಿಸಿರುವ 'ಮೈನಾ' ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶಿಸುತ್ತಿದ್ದಾರೆ.
ಈ ಸಿನಿಮಾಗೆ ‘ಕಲರ್ಫುಲ್’ಎಂದೂ ಹೆಸರಿಟ್ಟಿದ್ದಾರೆ. ಮುಂಬೈ ಮೂಲದ ನಿರ್ಮಾಪಕರೊಬ್ಬರ ಪುತ್ರನನ್ನು ಸಿನಿಮಾಗೆ ನಾಯಕನನ್ನಾಗಿ ಆಯ್ಕೆ ಮಾಡಿದ್ದು ನಾಯಕಿಗಾಗಿ ಹುಡುಕಾಟ ನಡೆಸಿದ್ದಾರೆ. ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗ್ಡೆ ಅವರು ‘ಮೈನಾ’ ಚಿತ್ರದ ಛಾಯಾಗ್ರಹಣದಲ್ಲಿ ದೂಧ್ ಸಾಗರ್ ಎಂಬ ಸ್ಥಳವನ್ನು ರಮಣೀಯವಾಗಿ ತೋರಿಸಿದ್ದರು. ಈಗ ಈ ರೀಮೇಕ್ ಸಿನಿಮಾಕ್ಕೂ ಸತ್ಯಹೆಗ್ಡೆ ಅವರೇ ಛಾಯಾಗ್ರಹಣ ಮಾಡಲಿದ್ದಾರೆ. ಆದರೆ ಕಥಾವಸ್ತು ನಿರೂಪಣೆಯಲ್ಲಿ ನಾಗಶೇಖರ್ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.