ಹೈದರಾಬಾದ್ :ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಸಮಂತಾ-ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸ್ಟಾರ್ ಜೋಡಿ ಡಿವೋರ್ಸ್ ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗಚೈತನ್ಯ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಡಿವೋರ್ಸ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹಬ್ಬಿತ್ತು. ಇದೀಗ ಕನ್ಫರ್ಮ್ ಆಗಿದ್ದು, ಈ ವಿಚಾರವಾಗಿ ನಟ ನಾಗಚೈತನ್ಯ ತಂದೆ, ಸ್ಟಾರ ನಟ ನಾಗಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿರಿ:ಬೇರೆಯಾಗುವುದಾಗಿ ಘೋಷಿಸಿದ ಸಮಂತಾ-ನಾಗ ಚೈತನ್ಯ.. ದಾಂಪತ್ಯ ಮುರಿದುಬಿದ್ದಿರುವುದು ಅಧಿಕೃತ..
ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ನಾಗಾರ್ಜುನ್, ಭಾರವಾದ ಹೃದಯದಿಂದ ನಾನು ಇದನ್ನ ಹೇಳುತ್ತಿದ್ದೇನೆ. ಸ್ಯಾಮ್ & ಚಾಯ್ ನಡುವೆ ನಡೆದಿರುವ ಘಟನೆ ನಿಜಕ್ಕೂ ಬೇಸರದ ವಿಚಾರ. ಗಂಡ-ಹೆಂಡತಿ ನಡುವೆ ಏನಾಗಿದೆ ಅನ್ನೋದು ತುಂಬಾ ವೈಯಕ್ತಿಕ ವಿಚಾರವಾಗಿದೆ.
ಸಮಂತಾ ಮತ್ತು ನಾಗಚೈತನ್ಯ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜೊತೆ ನಾನು ಕಳೆದಿರುವ ಕ್ಷಣಗಳು ಯಾವಾಗಲೂ ನೆನಪಿನಲ್ಲಿರುತ್ತವೆ. ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ! ಇಬ್ಬರಿಗೂ ದೇವರು ಆಶೀರ್ವಾದ ಮಾಡಿ, ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.