ಸಮಂತಾ ಅಕ್ಕಿನೇನಿಗೆ ಇಂದು 33 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಪ್ರತಿ ಬಾರಿಯಂತೆ ಈ ಬಾರಿ ಸ್ನೇಹಿತರ ಜೊತೆ ಸಮಂತಾ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗದಿದ್ದರೂ ಮನೆಯಲ್ಲಿ ವಿಶೇಷವಾಗಿ ಪತಿ, ಅತ್ತೆ, ಮಾವನೊಂದಿಗೆ ಸ್ಯಾಮ್ ತಮ್ಮ ಬರ್ತಡೇಯನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ತನಗಾಗಿ ಪತಿ ಮಾಡಿದ ಬರ್ತಡೇ ಕೇಕ್ ಮುಂದೆ ಕೈ ಮುಗಿದು ಪ್ರಾರ್ಥಿಸಿದ ಸಮಂತಾ..!
ಟಾಲಿವುಡ್ ನಾಯಕಿ ಸಮಂತಾ ಅಕ್ಕಿನೇನಿಗೆ ಇಂದು 33ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸ್ಯಾಮ್ ಪತಿ ನಾಗಚೈತನ್ಯ ಪ್ರೀತಿಯ ಪತ್ನಿಗಾಗಿ ಕೇಕ್ ತಯಾರಿಸಿ ಸರ್ಪೈಸ್ ನೀಡಿದ್ದಾರೆ.
ನಿನ್ನೆ ರಾತ್ರಿ ನಾಗಚೈತನ್ಯ ಪತ್ನಿ ಸಮಂತಾಗಾಗಿ ವಿಶೇಷ ಕೇಕ್ ತಯಾರಿಸಿ ಪತ್ನಿಗೆ ಸರ್ಪೈಸ್ ನೀಡಿದ್ದಾರೆ. ಸಮಂತಾ ಕೂಡಾ ಪತಿ ಮಾಡಿರುವ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ನಾಗಚೈತನ್ಯ ಕೇಕ್ ಮಾಡುತ್ತಿರುವುದು ಹಾಗೂ ಸಮಂತಾ ಕೇಕ್ ಕತ್ತರಿಸುವ ಮುನ್ನ ಕೇಕ್ ಮುಂದೆ ಕೈ ಮುಗಿದು ದೇವರನ್ನು ಪ್ರಾರ್ಥಿಸುತ್ತಿರುವ ವಿಡಿಯೋ ಹಾಗೂ ಪೋಟೋ ವೈರಲ್ ಆಗಿದೆ. ಸಮಂತಾ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ ಸೆಲಬ್ರಿಟಿಗಳು ಕೂಡಾ ಶುಭ ಕೋರಿದ್ದಾರೆ.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಮಂತಾ ಋತುಪ್ರಭು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಕಾಲೇಜಿನಲ್ಲಿ ಓದುವಾಗ ಪ್ಯಾಕೆಟ್ ಮನಿಗಾಗಿ ಫಂಕ್ಷನ್ ಹಾಲ್ನಲ್ಲಿ ಕೆಲಸ ಕೂಡಾ ಮಾಡಿದ್ದಾರೆ ಸಮಂತಾ. ನನಗೆ ಎಂದು ಒಂದು ಸ್ವಂತ ಮನೆ ಇರಬೇಕು, ನನ್ನ ಬ್ಯಾಂಕ್ ಅಕೌಂಟ್ನಲ್ಲಿ 50 ಲಕ್ಷ ರೂಪಾಯಿ ಹಣ ಇದ್ದರೆ ಸಾಕು ಎಂದು ಕನಸು ಕಂಡ ಸಮಂತಾಗೆ ವಿಧಿ ಒಂದು ಅವಕಾಶ ನೀಡೇ ಬಿಟ್ಟಿತು. ತಮಗೆ ದೊರೆತ ಅವಕಾಶವನ್ನು ಬಿಡದೆ ಛಲ ಸಾಧಿಸಿದ ಸ್ಯಾಮ್ ಇಂದು ಟಾಲಿವುಡ್ನಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ಈಗ ಟಾಲಿವುಡ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಅವರ ಪುತ್ರ ನಾಗಚೈತನ್ಯ ಅವರನ್ನು ಮದುವೆಯಾಗಿ ಸಮಂತಾ ಅಕ್ಕಿನೇನಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.