ಕರ್ನಾಟಕ

karnataka

ETV Bharat / sitara

ವಿಶೇಷ ದಿನದಂದು ಕೆ.ಎಸ್​. ಚಿತ್ರ ಅವರನ್ನು ತಂಗಿ ಎಂದು ಕರೆದ ನಾದಬ್ರಹ್ಮ - KS Chitra birthday is on July 27

ಇಂದು ಖ್ಯಾತ ಗಾಯಕಿ ಚಿತ್ರ ಅವರ ಹುಟ್ಟುಹಬ್ಬ. ಚಿತ್ರ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವ ನಾದಬ್ರಹ್ಮ, ಚಿತ್ರ ಅವರನ್ನು ನನ್ನ ತಂಗಿ ಎಂದು ಹೊಗಳಿದ್ದಾರೆ.

Nadabramha hamsalekha
ಕೆ.ಎಸ್​. ಚಿತ್ರ

By

Published : Jul 27, 2020, 6:26 PM IST

ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಾಡಿ ಹೆಸರು ಮಾಡಿದ ಗಾಯಕಿ ಎಂದರೆ ಕೆ.ಎಸ್​. ಚಿತ್ರ. ಕನ್ನಡ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬಂಗಾಳಿ, ಒರಿಯಾ, ಅಸ್ಸಾಮಿ ಹೀಗೆ 7 ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಸಂಗೀತಪ್ರಿಯರನ್ನು ಸೆಳೆದ ಮಹಾನ್ ಗಾಯಕಿ ಇವರು.

ಚಿತ್ರ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ ನಾದಬ್ರಹ್ಮ

ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದೀಗ ಹಂಸಲೇಖ ಅವರು ಕೆ.ಎಸ್​​​​​. ಚಿತ್ರ ಅವರ ಗುಣಗಾನ ಮಾಡಿರುವುದಲ್ಲದೆ, ಚಿತ್ರ ನನ್ನ ತಂಗಿ ಎಂದು ಹೇಳಿದ್ದಾರೆ. ಇಂದು ಕೆ.ಎಸ್. ಚಿತ್ರ ಅವರ ಹುಟ್ಟುಹಬ್ಬವಾಗಿದ್ದು ಈ ಗಾನ ಸರಸ್ವತಿ ಬಗ್ಗೆ ಹಂಸಲೇಖ ಮುಕ್ತಕಂಠದಿಂದ ಹೊಗಳಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಪತ್ನಿ ಜೊತೆ ಹಂಸಲೇಖ

ಈ ಗಾನ ಕೋಗಿಲೆ ನನ್ನ ತಂಗಿ ಆಗಿರುವುದು ನನ್ನ 5 ಪುಣ್ಯಗಳಲ್ಲಿ ಒಂದು. ನಿನ್ನೆ ನನ್ನ ಮಗಳ ಹುಟ್ಟುಹಬ್ಬ, ಇಂದು ನನ್ನ ತಂಗಿ ಹುಟ್ಟುಹಬ್ಬ, ನಾಳೆ ನನ್ನ ಮಗನ ಹುಟ್ಟುಹಬ್ಬವಾಗಿರುವುದು ನಿಜಕ್ಕೂ ನನಗೆ ಬಹಳ ಸಂತೋಷ. ನಿಮ್ಮ ಜೀವನ ಉಜ್ವಲವಾಗಿರಲಿ ಎಂದು ನಾದಬ್ರಹ್ಮ ಚಿತ್ರ ಅವರನ್ನು ಹರಸಿ ಹಾರೈಸಿದ್ದಾರೆ.

ಗಾನ ಕೋಗಿಲೆ ಕೆ.ಎಸ್​. ಚಿತ್ರ

ABOUT THE AUTHOR

...view details