ಕರ್ನಾಟಕ

karnataka

ETV Bharat / sitara

ಹಿಂದಿ ರೀಮೇಕ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕನ್ನಡತಿ ನಭಾ - Director Merlapaka Gandhi

2018 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ 'ಅಂಧಾಧುನ್' ಇದೀಗ ತೆಲುಗಿಗೆ ರೀಮೇಕ್ ಆಗುತ್ತಿದ್ದು ಚಿತ್ರದಲ್ಲಿ ಕನ್ನಡತಿ ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಮೇರ್ಲಪಕ ಗಾಂಧಿ ನಿರ್ದೇಶಿಸುತ್ತಿದ್ದಾರೆ.

Nabha natesh
ನಭಾ ನಟೇಶ್

By

Published : Aug 21, 2020, 12:05 PM IST

ಶಿವರಾಜ್​ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದ ಮೂಲಕ ಕರಿಯರ್ ಆರಂಭಿಸಿ ಈಗ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಭಾ ನಟೇಶ್ ಅವರಿಗೆ ಒಂದಾದ ಮೇಲೊಂದರಂತೆ ಅವಕಾಶಗಳು ಹುಡುಕಿ ಬರುತ್ತಿವೆ. ಈಗಾಗಲೇ ಅವರು ಟಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಇದೀಗ ಹಿಂದಿ ಚಿತ್ರವೊಂದನ್ನು ತೆಲುಗಿಗೆ ರೀಮೇಕ್ ಮಾಡಲಾಗುತ್ತಿದ್ದು ಅದರಲ್ಲಿ ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2018 ರಲ್ಲಿ ಬಿಡುಗಡೆಯಾದ 'ಅಂಧಾದುನ್' ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಕನ್ನಡದ ನಿರ್ದೇಶಕ ಹೇಮಂತ್ ರಾವ್ ಕೂಡಾ ಕೆಲಸ ಮಾಡಿದ್ದರು. ಶ್ರೀ ರಾಮ್ ರಾಘವನ್, ಪೂಜಾ, ಅರ್ಜಿತ್ ಹಾಗೂ ಯೋಗೇಶ್ ಕೂಡಾ ಚಿತ್ರಕಥೆಗೆ ಕೆಲಸ ಮಾಡಿದ್ದರು. ಈ ಹಿಂದಿ ಸಿನಿಮಾವನ್ನು ಕನ್ನಡಕ್ಕೆ ತರಬೇಕು ಎಂದು 'ಗೋಧಿಬಣ್ಣ ಸಾಧಾರಣ ಮೈಕಟ್ಟು' ನಿರ್ದೇಶಕ ಹೇಮಂತ್ ರಾವ್ ಪ್ರಯತ್ನ ಮಾಡಿದ್ದೂ ಉಂಟು. ಆಯುಷ್ಮಾನ್ ಖುರಾನ, ರಾಧಿಕಾ ಆಪ್ಟೆ ಹಾಗೂ ತಬು ಪಾತ್ರಗಳನ್ನು ಕನ್ನಡದಲ್ಲಿ ಯಾರು ಮಾಡಬಹುದು ಎಂದು ಕೂಡಾ ಅವರು ಲೆಕ್ಕಾಚಾರ ಹಾಕಿದ್ದರು.

ಇದೀಗ ತೆಲುಗಿಗೆ ಈ ಚಿತ್ರ ರೀಮೇಕ್ ಆಗುತ್ತಿದೆ. ಡಿಸ್ಕೋ ರಾಜ, ಸೋಲೋ ಬ್ರತುಕೆ ಸೋ ಬೆಟರ್, ನನ್ನು ದೋಚುಕುಂದುವಟೆ, ಇಸ್ಮಾರ್ಟ್ ಶಂಕರ್ ಚಿತ್ರಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಗೆದ್ದ ನಟಿ ನಭಾ ಇದೀಗ ಹಿಂದಿಯಲ್ಲಿ ರಾಧಿಕಾ ಆಪ್ಟೆ ಮಾಡಿದ್ದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ನಿತಿನ್ ಮಾಡುತ್ತಿದ್ದಾರೆ. ತಬು ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಚಿತ್ರವನ್ನು ಮೇರ್ಲಪಕ ಗಾಂಧಿ ನಿರ್ದೇಶನ ಮಾಡಲಿದ್ದಾರೆ.

ABOUT THE AUTHOR

...view details