ಬೆಂಗಳೂರು :ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಜನ್ಮದಿನದ ನಿಮಿತ್ತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಟ ಕರಿಸುಬ್ಬು ಹೇಳಿದ್ರು.
ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ 'ಮೂಕ ಹಕ್ಕಿಯು ಹಾಡುತಿದೆ' ಸಂಗೀತ ಸಂಜೆ - undefined
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಮೇ 18ರಂದು ಬೆಂಗಳೂರಿನ ಪ್ರೇಮಚಂದ್ರ ಸಾಗರ ಸಭಾಂಗಣದಲ್ಲಿ ಅವರು ನಿರ್ದೇಶಿಸಿದ ಸಿನಿಮಾ ಹಾಡುಗಳ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿದೆ.
![ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ 'ಮೂಕ ಹಕ್ಕಿಯು ಹಾಡುತಿದೆ' ಸಂಗೀತ ಸಂಜೆ](https://etvbharatimages.akamaized.net/etvbharat/prod-images/768-512-3280901-thumbnail-3x2-puttanna.jpg)
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು, ಮೇ.18 ಪುಟ್ಟಣ್ಣ ಅವರ ಜನ್ಮದಿನ. ಅಂದೇ ಬೆಂಗಳೂರಿನ ಪ್ರೇಮಚಂದ್ರ ಸಾಗರ ಸಭಾಂಗಣದಲ್ಲಿ 'ಮೂಕ ಹಕ್ಕಿಯು ಹಾಡುತಿದೆ' ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ ಗೀತ ಗಾಯನ ಈ ಕಾರ್ಯಕ್ರಮದಲ್ಲಿರಲಿದೆ. ಅಂದು ಹಿರಿಯ ನಟಿ ಜಯಂತಿ, ಹಿರಿಯ ನಟ ಶಿವರಾಮ್, ಶ್ರೀನಾಥ್, ಶ್ರೀಧರ್, ರಾಮಕೃಷ್ಣ, ಜೈ ಜಗದೀಶ್, ಪದ್ಮಾ ವಾಸಂತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಪುಟ್ಟಣ್ಣ ಅವರ ಚಿತ್ರಗೀತೆಗಳ ಜತೆಗೆ ಡಾ.ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಅವರ ಸ್ಮರಣಾರ್ಥವಾಗಿ ಅವರ ಸಿನಿಮಾಗಳ ಗೀತ ಗಾಯನ ಕೂಡ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರೂ. 250 ರಿಂದ 700 ಟಿಕೆಟ್ ಬೆಲೆ ನಿಗದಿ ಪಡಿಸಲಾಗಿದೆ. ಇದರಿಂದ ಬಂದ ಹಣವನ್ನು ಗೋವುಗಳು ರಕ್ಷಣೆಯ ಟ್ರಸ್ಟ್ಗೆ ನೀಡಲಾಗುತ್ತೆ ಮಾಧ್ಯಮಗೋಷ್ಟಿಯಲ್ಲಿದ್ದ ಕಾರ್ಯಕ್ರಮದ ಆಯೋಜಕಿ ದಿವ್ಯಶ್ರೀ ತಿಳಿಸಿದರು.