ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗು ಗಾಯಕನಾಗಿರುವ ರಘು ದೀಕ್ಷಿತ್ ಅವರ ತಾಯಿ ವಿಧಿವಶರಾಗಿದ್ದಾರೆ.
ಸದ್ಯ ರಘು ದೀಕ್ಷಿತ್ ತಂಡ ದುಬೈನಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ನೀಡುತ್ತಿದೆ. ಮ್ಯೂಸಿಕ್ ಶೋ ಮುಗಿಯುತ್ತಿದ್ದಂತೆಯೇ ರಘು ದೀಕ್ಷಿತ್ ದುಬೈನಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ರಘು ದೀಕ್ಷಿತ್ ಮೈಸೂರಿನಲ್ಲಿರುವ ಮನೆಗೆ ತೆರಳಲಿದ್ದಾರೆ. ಮೈಸೂರಿನಲ್ಲಿ ರಘು ದೀಕ್ಷಿತ್ ತಾಯಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.