ಬಿಗ್ಬಾಸ್ಗೆ ಹೋಗಿ ಬಂದವರಲ್ಲಿ ಎಷ್ಟೋ ಮಂದಿ ಇದೀಗ ಬಹಳ ಖ್ಯಾತರಾಗಿದ್ದಾರೆ. ಈ ಮಹಾಮನೆಯಲ್ಲಿ ಉಂಟಾಗುವ ಅನುಭವ ಹೊರಗೆ ಸಿಗುವುದಿಲ್ಲ ಎನ್ನುವುದು ಇಲ್ಲಿ ಹೋಗಿ ಬಂದವರ ಅಭಿಪ್ರಾಯ. ಸಂಗೀತ ನಿರ್ದೇಶಕ, ಗಾಯಕ ನವೀನ್ ಸಜ್ಜು ಕೂಡಾ ಅದೇ ಮಾತು ಹೇಳುತ್ತಾರೆ.
ಅದೊಂದೇ ಕಾರಣಕ್ಕೆ ನವೀನ್ ಸಜ್ಜು ಇನ್ನೂ ಬಿಗ್‌ಬಾಸ್-7 ನೋಡಿಲ್ಲವಂತೆ..! - ಇದುವರೆಗೂ ಸೀಸನ್ 7 ನೋಡಿರದ ನವೀನ್ ಸಜ್ಜು
ಸೀಸನ್ 7 ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ನಾನು ಒಂದು ದಿನವೂ ನೋಡಿಲ್ಲ. ನಾನು ಬಿಗ್ಬಾಸ್ನಲ್ಲಿದ್ದ ದಿನಗಳ ನೆನಪಿನಲ್ಲೇ ಉಳಿಯಬೇಕು ಎಂಬ ಕಾರಣದಿಂದ ಕಾರ್ಯಕ್ರಮ ನೋಡುತ್ತಿಲ್ಲ ಎಂದು ನವೀನ್ ಸಜ್ಜು ಹೇಳಿದರು.
'ಬ್ರಹ್ಮಚಾರಿ' ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ವೇಳೆ ಬಿಗ್‌ಬಾಸ್ ಸೀಸನ್-7ರ ಬಗ್ಗೆ ಮಾತನಾಡಿದ ನವೀನ್ ಸಜ್ಜು, ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ, ಶಾಲಾ ಜೀವನ, ಕಾಲೇಜು ಲೈಫ್ ಎಂಬ ನೆನಪು ಇದ್ದೇ ಇರುತ್ತದೆ. ಇವೆಲ್ಲವನ್ನೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ನನ್ನ ಜೀವನದಲ್ಲಿ ಬಿಗ್‌ಬಾಸ್ ಎಂಬುದು ಮರೆಯಲಾರದ ಅನುಭವ. ಈಗ ಸೀಸನ್ 7 ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ನಾನು ಒಂದು ದಿನವೂ ನೋಡಿಲ್ಲ. ನಾನು ಈಗ ಬಿಗ್‌ಬಾಸ್ ನೋಡಿದರೆ ನನ್ನ ಮೈಂಡ್ ಬೇರೆ ಕಡೆ ಡೈವರ್ಟ್ ಆಗುತ್ತದೆ. ನಾನು ಬಿಗ್ಬಾಸ್ನಲ್ಲಿದ್ದ ದಿನಗಳ ನೆನಪಿನಲ್ಲೇ ಉಳಿಯಬೇಕು ಎಂಬ ಕಾರಣದಿಂದ ಕಾರ್ಯಕ್ರಮ ನೋಡುತ್ತಿಲ್ಲ. ಆದರೆ, ಸೋಷಿಯಲ್ ಮೀಡಿಯಾ ಮೂಲಕ ಅಪ್ಡೇಟ್ ತಿಳಿದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಖಂಡಿತ ಬಿಗ್‌ಬಾಸ್ ನೋಡುತ್ತೇನೆ ಎಂದು ನವೀನ್ ಸಜ್ಜು ಹೇಳಿದರು.
ಇನ್ನು, ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರಾಗಬಹುದು ಎಂಬ ಪ್ರಶ್ನೆಗೆ ಅದನ್ನು ಜಡ್ಜ್ ಮಾಡಲು ಇನ್ನೂ ಮೂರು ತಿಂಗಳು ಸಮಯ ಬೇಕು. ಈಗಲೇ ಯಾವುದನ್ನು ಹೇಳಲು ಸಾಧ್ಯವಿಲ್ಲ. ಈಗ ಹೋಗಿರುವವರಲ್ಲಿ ನನಗೆ ಬಹುತೇಕ ಎಲ್ಲರೂ ಗೊತ್ತು ಎಂದು ನವೀನ್ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದರು.