ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನ ಸೆಲೆಬ್ರಿಟಿಗಳು ಸಿನಿಮಾ ಹೊರತುಪಡಿಸಿ ಬೇರೆ ಬೇರೆ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಸಂಗೀತ ನಿರ್ದೇಶಕ ಹಾಗು ವೈದ್ಯರು ಆಗಿರುವ ಕಿರಣ್ ತೋಟಂಬೈಲು, ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ವಾರಿಯರ್ ಈ ಸಂಗೀತ ನಿರ್ದೇಶಕ.. ಸೋಂಕಿನ ಕುರಿತು ಕಿರಣ್ ತೋಟಂಬೈಲ್ ಮಾಹಿತಿ - Kiran Thottambail
ಉಪೇಂದ್ರ, ರಚಿತಾ ರಾಮ್, ಸೋನು ಗೌಡ ನಟನೆಯ ಐ ಲವ್ ಯೂ, ಚಿತ್ರದ ಮೂಲಕ ಖ್ಯಾತಿ ಹೊಂದಿರುವ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಮೂಲತಃ ವೈದ್ಯರು. ಬಿಜಿಎಸ್ ಆಸ್ಪತ್ರೆಯಲ್ಲಿ ಅವರು ಅಂಗರಚನಾ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಸಮಯದಲ್ಲಿ ಬಿಜಿಎಸ್ ಆಸ್ಪತ್ರೆಯಲ್ಲಿಯೇ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 'ಈಟಿವಿ ಭಾರತ'ನೊಂದಿಗೆ ಮಾತನಾಡಿರುವ ಅವರು, ತಮ್ಮ ಸೇವೆ ಹಾಗೂ ಕೊರೊನಾ ಸೋಂಕಿನ ಕುರಿತು ಮಾತನಾಡಿದ್ದಾರೆ.
ಹೌದು, ಉಪೇಂದ್ರ, ರಚಿತಾ ರಾಮ್, ಸೋನು ಗೌಡ ನಟನೆಯ ಐ ಲವ್ ಯೂ, ಚಿತ್ರದ ಮೂಲಕ ಖ್ಯಾತಿ ಹೊಂದಿರುವ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಮೂಲತಃ ವೈದ್ಯರು. ಬಿಜಿಎಸ್ ಆಸ್ಪತ್ರೆಯಲ್ಲಿ ಅಂಗರಚನಾ ತಜ್ಞರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಬಿಜಿಎಸ್ ಆಸ್ಪತ್ರೆಯಲ್ಲಿಯೇ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ನಮ್ಮ ರಾಜ್ಯದಲ್ಲಿ ಯಾವ ಸ್ಟೇಜ್ ನಲ್ಲಿದೆ, ಕೊರೊನಾ ಹೆಚ್ಚಾಗೋದಿಕ್ಕೆ ಯಾರು ಕಾರಣ? ಕೊರೊನಾ ಮೂರನೇ ಅಲೆ ಬರುತ್ತಾ? ಕೊರೊನಾ ಸೋಂಕಿತರು ಇರುವ ಆಸ್ಪತ್ರೆಗಳಲ್ಲಿ ಸಂಗೀತ ಎಷ್ಟು ಮುಖ್ಯ ಆಗುತ್ತೆ? ಸದ್ಯ ಕಿರಣ್ ಎಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡ್ತಾ ಇದ್ದಾರೆ ಹೀಗೆ ಹಲವು ವಿಚಾರಗಳ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾರೆ.