ಕರ್ನಾಟಕ

karnataka

ETV Bharat / sitara

ನಾದಬ್ರಹ್ಮನ ಜನ್ಮದಿನಕ್ಕೆ ಮ್ಯೂಜಿಕ್ ಮ್ಯಾನ್ಷನ್​​​​​​ನಿಂದ ಸಂಗೀತದ ಉಡುಗೊರೆ - Music mansion gift to Hamsalekha

ನಾದಬ್ರಹ್ಮ ಹಂಸಲೇಖ ಅವರು ಇಂದು 70 ನೇ ವಸಂತಕ್ಕೆ ಕಾಲಿಟ್ಟಿದ್ದು ಮ್ಯೂಸಿಕ್ ಮ್ಯಾನ್ಷನ್​​​​ ಈ ಸಂಗೀತ ಬ್ರಹ್ಮನಿಗೆ ಸಂಗೀತದ ಉಡುಗೊರೆಯನ್ನೇ ನೀಡಿದೆ.

Music director Hamsalekha 70th Birthday
ನಾದಬ್ರಹ್ಮ ಹಂಸಲೇಖ

By

Published : Jun 23, 2020, 3:43 PM IST

ಇಂದು ನಾದಬ್ರಹ್ಮ ಹಂಸಲೇಖ ಅವರ ಜನ್ಮದಿನ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಹಂಸಲೇಖ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕೊರೊನಾ ಭೀತಿ ಕಾರಣ ಹಂಸಲೇಖ ತಮ್ಮ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹಂಸಲೇಖ ಎಷ್ಟೋ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಅಲ್ಲದೆ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಸ್ಯಾಂಡಲ್​​​ವುಡ್​​ನಲ್ಲಿ ಹಂಸಲೇಖ ಹಾಗೂ ವಿ. ರವಿಚಂದ್ರನ್ ಜೋಡಿ, ಮೋಡಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. 1987 ರ 'ಪ್ರೇಮಲೋಕ' ಚಿತ್ರದಿಂದ ಸುಮಾರು 25 ಸಿನಿಮಾಗಳಲ್ಲಿ ಮೋಡಿ ಮಾಡಿದೆ. ಡಾ. ರಾಜ್​​ಕುಮಾರ್, ಡಾ. ವಿಷ್ಣುವರ್ಧನ್​​​​​​ ಅವರಂತ ನಟನಿಂದ ಇಂದಿನ ನಾಯಕರಿಗೆ ಕೂಡಾ ಸಂಗೀತ ನಿರ್ದೇಶನ ಮಾಡಿರುವ ಏಕೈಕ ಸಂಗೀತ ನಿರ್ದೇಶಕ ಹಂಸಲೇಖ.

ಸಂಗೀತ ನಿರ್ದೇಶಕ ಹಂಸಲೇಖ

ಇಂದು ಹಂಸಲೇಖ ಜನ್ಮದಿನದ ಕಾರಣ, ಮ್ಯೂಜಿಕ್ ಮ್ಯಾನ್ಷನ್ ಒಂದು ಕೊಡುಗೆ ನೀಡಿದೆ. ಈ ಸಂಗೀತದಲ್ಲಿ ವಾದ್ಯಗಳಿಂದ ಹೊರ ಹೊಮ್ಮುವ ಹಂಸಲೇಖ ರಾಗ ಸಂಯೋಜನೆಯ ಹಾಡುಗಳು ಅರ್ಜುನ್ ಜನ್ಯ ಅವರ ಕೀ ಬೋರ್ಡ್​ನಿಂದ ಆರಂಭವಾಗಿ ಚಂದನ್ ಶೆಟ್ಟಿ ಅವರ ಜನ್ಮದಿನದ ಶುಭಾಶಯಗಳೊಂದಿಗೆ ಕೊನೆಯಾಗುತ್ತದೆ.

ರವಿಚಂದ್ರನ್, ಹಂಸಲೇಖ

ಈ ವಾದ್ಯಸಂಗೀತದಲ್ಲಿ ಸುಮಾರಾಣಿ-ಸಿತಾರ್​​​​​​​​​​​​​​​​​​, ಶ್ರೀನಿವಾಸ್, ಹಂಸಿನಿ ಭಾರದ್ವಾಜ್ ಹಾಗೂ ಸಂಜಯ್ ಹಿರ್ಯಾಡ್ಕ-ಸ್ಯಾಕ್ಸಫೋನ್, ವೇಣುಗೋಪಾಲ್ ವೆಂಕಿ-ಪಿಯಾನೋ, ರೋನಾಲ್ಡ್ ಕೊಟ್ಸ್ ಹಾಗೂ ಷಡ್ರಚ್ ಸೋಲೊಮನ್-ಗಿಟಾರ್​​​​, ರಂಜನ್ ಬೆವುರ-ಪಿಟೀಲು, ರುದ್ರೇಶ್​​-ಶೆಹನಾಯಿ, ಪ್ರವೀಣ್ ಷಣ್ಮುಗಮ್​​​-ಪ್ಯಾಡ್ ಹಾಗೂ ದಫ್​​​​, ಪ್ರಕಾಶ್​​​​ ಆಂಟೋನಿ-ಎಲೆಕ್ಟ್ರಾನಿಕ್ ಡ್ರಮ್ , ದೇವ-ಡ್ರಮ್ಸ್, ಪ್ರದ್ಯುಮ್ನ-ತಬಲಾ, ಶಿವಮಲ್ಲು-ಡೋಲಕ್, ಕಿಶೋರ್ ಶಿವಲಿಂಗಪ್ಪ-ಸರೂದ್ ಭಾಗಿಯಾಗಿದ್ದಾರೆ.

70 ನೇ ವಸಂತಕ್ಕೆ ಕಾಲಿಟ್ಟ ನಾದಬ್ರಹ್ಮ

ABOUT THE AUTHOR

...view details