ನಟ ಉಪೇಂದ್ರ ನಟನೆಯ 'ಎ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಸ್ಟೈಲಿಶ್ ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್. ವಿಶೇಷವೆಂದರೆ ಅವರ ಸಂಗೀತ ನಿರ್ದೇಶನದ ಪ್ರಯಾಣ ಈಗ ಶತಕ ಬಾರಿಸಿದೆ.
ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ ಮುಖೇನ ಶತಕ ಬಾರಿಸಿದ ಗುರುಕಿರಣ್ - ನೂರನೆ ಸಿನಿಮಾ
'ಎ' ಚಿತ್ರದ ಮೂಲಕ ತಮ್ಮ ಸಂಗೀತ ನಿರ್ದೇಶನದ ವೃತ್ತಿ ಆರಂಭಿಸಿ ಗುರುಕಿರಣ್, ಈಗ ಶತಕದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರು ಡಾ. ಶಿವರಾಜ್ ಕುಮಾರ್ ಹಾಗೂ ರಚಿತ ರಾಮ್ ಅಭಿನಯದ 'ಆಯುಷ್ಮಾನ್ ಭವ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಇದು ಅವರ ಸಂಗೀತ ಸಂಯೋಜನೆಯ 100ನೇ ಚಿತ್ರ.

ಆಯುಷ್ಮಾನ್ ಭವ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಕಿರಣ್, 'ಎ' ಚಿತ್ರದಿಂದ ಇಲ್ಲಿಯವರೆಗೂ ಸಿನಿಮಾ ಸಂಗೀತದ ಬಂಡಿ ಉರುಳಿಕೊಂಡು ಬಂದಿದೆ. ನಾನು ಆರ್ಕೆಸ್ಟ್ರಾದಲ್ಲಿ ಹಾಡು ಕೊಂಡಿದ್ದ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಗೆ ಬರುತ್ತೇನೆ ಎಂದು ಕನಸಲ್ಲೂ ಸಹ ಎಣಿಸಿರಲಿಲ್ಲ. ಎಲ್ಲರ ಸಹಕಾರದಿಂದ ನಾನೀಗ 100 ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ನಾನು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ಸಂಗೀತ ನಿರ್ದೇಶಕನಾಗಿ ಅವಕಾಶ ಕೊಟ್ಟ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಕೆಲಸ ಕಲಿಸಿದ ಸಂಗೀತ ಗುರು ವಿ. ಮನೋಹರ್ ಅವರಿಗೆ ಧನ್ಯವಾದ ತಿಳಿಸಿದರು.