ಕರ್ನಾಟಕ

karnataka

ETV Bharat / sitara

ಕೊರೊನಾ ಬಗ್ಗೆ ಆಲ್ಬಂ ತಯಾರಿಸಿದ ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ - Two Albums made about Corona

ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈಗಾಗಲೇ ಕೊರೊನಾ ಕುರಿತಾದ ಹಾಡುಗಳನ್ನು ಹೊರತಂದಿದ್ದಾರೆ. ಇದೀಗ ಸ್ಯಾಂಡಲ್​​​ವುಡ್​​​​​ ಮತ್ತೊಬ್ಬ ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್​ ಕೂಡಾ ಕೊರೊನಾ ಕುರಿತಾದ ಎರಡು ಆಲ್ಬಂ ಹಾಡುಗಳನ್ನು ಹೊರತಂದಿದ್ದಾರೆ.

Ganesh Narayan
ಗಣೇಶ್ ನಾರಾಯಣ್​

By

Published : Apr 7, 2020, 6:16 PM IST

ಈಗಾಗಲೇ ಕೊರೊನಾ ಬಗ್ಗೆ ಸಾಕಷ್ಟು ಹಾಡುಗಳು, ಸ್ಕಿಟ್​​​​​ಗಳು ಹುಟ್ಟಿಕೊಂಡಿವೆ. ಕೆಲವು ದಿನಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೊರೊನಾ ಕುರಿತಾದ ಹಾಡೊಂದನ್ನು ಹಾಡಿದ್ದರು. ಪತ್ನಿ ನಿವೇದಿತಾ ಗೌಡ ಚಂದನ್ ಹಾಡಿಗೆ ಕ್ಯೂಟ್ ಆಗಿ ಡ್ಯಾನ್ಸ್ ಕೂಡಾ ಮಾಡಿದ್ದರು.

ನಾದಬ್ರಹ್ಮ ಹಂಸಲೇಖ ಕೂಡಾ ಒಂದು ಹಾಡನ್ನು ಹೊರ ತಂದಿದ್ದರು. ಇದೀಗ ಮತ್ತೊಬ್ಬ ನಿರ್ದೇಶಕ, ಗಾಯಕ ಆರ್​​.ಎಸ್. ಗಣೇಶ್​​​​​ ನಾರಾಯಣ್ ಕೂಡಾ ಕೊರೊನಾಗೆ ಸಂಬಂಧಿಸಿದ ಹಾಡನ್ನು ತಯಾರಿಸಿದ್ದಾರೆ. ಈ ಬಗ್ಗೆ 2 ವಿಡಿಯೋ ಆಲ್ಬಂ ರೆಡಿಯಾಗಿದ್ದು ಒಂದರಲ್ಲಿ ವೈರಾಣು ಬಗ್ಗೆ ಎಚ್ಚರ ವಹಿಸಬೇಕು ಎನ್ನುವ ಸಾಲುಗಳಿವೆ ‘ಎಚ್ಚರ ಮನುಜನೇ ಎಚ್ಚರ, ಕೊರೊನಾ ರೋಗವು ಭೀಕರ‘ ಎಂಬ ಹಾಡನ್ನು ತಾವೇ ಹಾಡಿದ್ದಾರೆ. ಎರಡನೇ ಆಲ್ಬಂನಲ್ಲಿ ಹಗಲಿರುಳು ಶ್ರಮ ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು, ಸರ್ಕಾರಿ ನೌಕರರಿಗೆ ಗೌರವ ಸಲ್ಲಿಸಿದ್ದಾರೆ. ‘ಬೆಳಗು ಮನ ಬೆಳಗಿಸು ನನ್ನ ಭಾರತ‘ ಎಂಬ ಈ ಸಾಲಿಗೆ ಗಣೇಶ್​ ಜೊತೆ ಸೋದರ ರಮಣಿ ಸುಂದರೇಶನ್ ಧ್ವನಿಗೂಡಿಸಿದ್ದಾರೆ.

ಗಣೇಶ್ ನಾರಾಯಣ್​ 2000 ಇಸವಿಯಿಂದ ಸಂಗೀತ ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ‘ಕ‘ ಕನ್ನಡ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕ ಆಗಿ ಕೆಲಸ ಆರಂಭಿಸಿದ ಗಣೇಶ್​​​ ಅವರು ದಮಯಂತಿ, ತ್ರಯಂಬಕಮ್, 5 ಅಡಿ 7 ಅಂಗುಲ ಹಾಗೂ ಇನ್ನಿತರ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರು ಸಂಗೀತ ನಿರ್ದೇಶನ ಮಾತ್ರವಲ್ಲ ‘ಕಂಸಾಪುರ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗ ಕೊರೊನಾ ಬಗ್ಗೆ ತಯಾರಾದ ಹಾಡುಗಳು ಯೂಟ್ಯೂಬ್​​​ನಲ್ಲಿ ಲಭ್ಯವಿದೆ.

For All Latest Updates

ABOUT THE AUTHOR

...view details