ಕಿಚ್ಚ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಹಾಡಿನಿಂದಲೇ ಸೆನ್ಶೆಶನ್ ಕ್ರಿಯೇಟ್ ಮಾಡಿದ್ದ ಆ ಸಿನಿಮಾ ಕಿಚ್ಚನಿಗೆ ಒಳ್ಳೆಯ ಬ್ರೇಕ್ ನೀಡಿತ್ತು. ಅಷ್ಟೇ ಅಲ್ಲದೇ ಚಂದನವನಕ್ಕೆ ಶ್ರೀಧರ್ ವಿ ಸಂಭ್ರಮ್ ಎಂಬ ಪ್ರತಿಭಾವಂತ ಸಂಗೀತ ನಿರ್ದೇಶಕನನ್ನು ಪರಿಚಯ ಮಾಡಿಸಿತ್ತು. ಆ ಸಿನಿಮಾದ ಹಾಡುಗಳು ಶ್ರೀಧರ್ಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಇದರ ಜೊತೆಗೆ ಒಂದಷ್ಟು ಆಫರ್ಗಳು ಶ್ರೀಧರ್ರನ್ನು ಅರಸಿ ಬಂದಿದ್ದವು.
ಮುಸ್ಸಂಜೆ ಮಾತಿನ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಶ್ರೀಧರ್, ಇದೀಗ ಮುಗಿಲು ಪೇಟೆ ತಲುಪಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಮುಗಿಲುಪೇಟೆ ಚಿತ್ರಕ್ಕೆ ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರು ಕೆಲ ಖುಷಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.