ಬೆಂಗಳೂರು:ಕೊರೊನಾ ಮಹಾಮಾರಿಯಿಂದ ಕಳೆದ ಎರಡೂವರೆ ತಿಂಗಳಿನಿಂದ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿದೆ. ಸಿನಿಮಾವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು, ಪೋಷಕ ಕಲಾವಿದರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗ ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ಲಹರಿ ವೇಲು ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ.
ಸಂಗೀತ ಕಲಾವಿದರಿಗೆ ಲಹರಿ ಸಂಸ್ಥೆ ನೆರವು; KFMA ಗೆ 10 ಲಕ್ಷ ರೂ. ದೇಣಿಗೆ - bengalore latest news
ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಕೊರೊನಾ ಕಷ್ಟದಲ್ಲಿರುವ ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಲಹರಿ ಮ್ಯೂಸಿಕ್ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ.
ಲಹರಿ ವೇಲು
ಓದಿ: ನುಡಿದಂತೆ ನಡೆದ ರಾಕಿಂಗ್ ಸ್ಟಾರ್: ಕೃತಜ್ಞತೆ ಸಲ್ಲಿಸಿದ ಚಿತ್ರರಂಗದ ಕಾರ್ಮಿಕರು
ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಸಂಗೀತ ಸಂಸ್ಥೆ ಲಹರಿ ಮ್ಯೂಸಿಕ್ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ವೇಲು ಅವರ ಈ ಸಹಾಯಕ್ಕೆ ಕೆಎಫ್ಎಂಎ ಧನ್ಯವಾದ ತಿಳಿಸಿದೆ. ಈ ಹಣವನ್ನು ಸಂಕಷ್ಟದಲ್ಲಿರುವ ಸಂಗೀತಗಾರರಿಗೆ, ವಾದ್ಯಗಾರರಿಗೆ ಮತ್ತು ಹಾಡುಗಾರರಿಗೆ ತಲುಪಿಸುವುದಾಗಿ ಕೆಎಫ್ಎಂಎ ಅಧ್ಯಕ್ಷ ಸಾಧುಕೋಕಿಲ ತಿಳಿಸಿದ್ದಾರೆ.