'ಮರ್ಡರ್' ಸಿನಿಮಾ ಹೆಸರು ಕೇಳಿದರೆ ನಮಗೆ ನೆನಪಾಗುವುದು ಇಮ್ರಾನ್ ಹಶ್ಮಿ, ಅಶ್ಮಿತ್ ಪಟೇಲ್ ಹಾಗೂ ಮಲ್ಲಿಕಾ ಶರಾವತ್ ನಟಿಸಿರುವ ಬಾಲಿವುಡ್ ಸಿನಿಮಾ. ಇದೀಗ ಕನ್ನಡದಲ್ಲೂ ಈ ಸಿನಿಮಾ ಬರುತ್ತಿದೆ.
ಕನ್ನಡದಲ್ಲೂ ಬರ್ತಿದೆ 'ಮರ್ಡರ್-2'; ಶೀಘ್ರದಲ್ಲೇ ರಿಲೀಸ್ ಆಗಲಿದೆ ಮರ್ಡರ್ ಮಿಸ್ಟ್ರಿ ಸಿನಿಮಾ - undefined
ಮಂಡ್ಯ ನಾಗರಾಜ್ ನಿರ್ದೇಶನದ 'ಮರ್ಡರ್-2' ಸಿನಿಮಾ ಇದೇ ತಿಂಗಳ 26 ರಂದು ತೆರೆಗೆ ಬರುತ್ತಿದೆ. ಒಂದು ಕೊಲೆಯ ಸುತ್ತ ನಡೆಯುವ 'ಮರ್ಡರ್-2' ಚಿತ್ರ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಕಥೆ ಹೊಂದಿದೆ.
![ಕನ್ನಡದಲ್ಲೂ ಬರ್ತಿದೆ 'ಮರ್ಡರ್-2'; ಶೀಘ್ರದಲ್ಲೇ ರಿಲೀಸ್ ಆಗಲಿದೆ ಮರ್ಡರ್ ಮಿಸ್ಟ್ರಿ ಸಿನಿಮಾ](https://etvbharatimages.akamaized.net/etvbharat/prod-images/768-512-3924394-thumbnail-3x2-murder.jpg)
ಆದರೆ ಬಾಲಿವುಡ್ನಲ್ಲಿ ಈ ಸಿನಿಮಾ ತೆರೆಗೆ ಬರಲು ಮುನ್ನವೇ ನಿರ್ದೇಶಕ ಮಂಡ್ಯ ನಾಗರಾಜ್ 1994 ರಲ್ಲಿ ಸುರೇಶ್ ಹೆಬ್ಳೀಕರ್ ನಟನೆಯೊಂದಿಗೆ ಮರ್ಡರ್ ಹೆಸರಿನಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಇದೀಗ ಅವರು ಮರ್ಡರ್-2 ಸಿನಿಮಾ ಮೂಲಕ ಮತ್ತೆ ವಾಪಸಾಗಿದ್ದಾರೆ. ಒಂದು ವರ್ಷದ ಹಿಂದೆ ಸೆಟ್ಟೇರಿದ ಮರ್ಡರ್-2 ಸಿನಿಮಾ ಇದೀಗ ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗಿದೆ. ಮರ್ಡರ್ ಮಿಸ್ಟರಿ ಕಥೆ ಆಧರಿಸಿರುವ ಈ ಚಿತ್ರದಲ್ಲಿ, ಆನಂದ್ ಗಣೇಶ್, ಶಾಲಿನಿ ಹಾಗೂ ದೀಪಕ್ ಗಣೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಯಾವುದೇ ಪ್ರಚಾರ ಇಲ್ಲದೆ ಚಿತ್ರದ ಶೂಟಿಂಗ್ ಮುಗಿಸಿರುವ ಚಿತ್ರತಂಡ, ತಮ್ಮ ಚಿತ್ರದ ಬಗ್ಗೆ ಮಾಧ್ಯಮಗಳ ಮುಂದೆ ಅನುಭವ ಹಂಚಿಕೊಂಡಿತು. ಒಂದು ಕೊಲೆಯ ಸುತ್ತ ನಡೆಯುವ ಮರ್ಡರ್-2 ಚಿತ್ರ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಕಥೆಯನ್ನು ಹೊಂದಿದೆ. ತಾಯಿಯ ಋಣ, ಪೊಲೀಸ್ ಬೇಟೆ, ಯಾರಿವಳು, ಹೀಗೆ ಸುಮಾರು 13 ಸಿನಿಮಾಗಳನ್ನು ನಿರ್ಮಿಸಿರುವ ಹಾಗೂ ನಿರ್ದೇಶಿಸಿರುವ ಮಂಡ್ಯ ನಾಗರಾಜ್ ಮರ್ಡರ್-2 ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಹೈದರಾಬಾದ್ ಮೂಲದ ಸ್ಟಂಟ್ ಮಾಸ್ಟರ್ ಚಿತ್ರಕ್ಕೆ ವಿಭಿನ್ನ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು ಚಿತ್ರ ಇದೇ ತಿಂಗಳ 26 ರಂದು ತೆರೆ ಕಾಣುತ್ತಿದೆ.