ಕಾವೇರಿ ಉಳಿವಿಗಾಗಿ ಇಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾದ 'ಕಾವೇರಿ ಕೂಗು' ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಮಂದಿ ತಮ್ಮ ಬೆಂಬಲ ನೀಡಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲ, ಸೆಲಬ್ರಿಟಿಗಳು ಕೂಡಾ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
ಕಾವೇರಿ ಅಭಿಯಾನಕ್ಕೆ ಸಾಥ್ ನೀಡಿದ 'ಮುಂದಿನ ನಿಲ್ದಾಣ' ಚಿತ್ರತಂಡ
ವಿನಯ್ ಭಾರದ್ವಾಜ್ ನಿರ್ದೇಶನದ 'ಮುಂದಿನ ನಿಲ್ದಾಣ' ಚಿತ್ರತಂಡ ಕೂಡಾ 'ಕಾವೇರಿ ಕೂಗು' ಮಹಾ ಅಭಿಯಾನಕ್ಕೆ ಬೆಂಬಲ ನೀಡಿದೆ. ಇತ್ತೀಚೆಗೆ ಸದ್ಗುರು ವಾಸುದೇವ ಅವರನ್ನು ಭೇಟಿ ಮಾಡಿದ್ದ ಚಿತ್ರತಂಡ, ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದೆ.
ಇದೀಗ 'ಮುಂದಿನ ನಿಲ್ದಾಣ' ಚಿತ್ರತಂಡ ಕೂಡಾ ಈ ಅಭಿಯಾನದೊಂದಿಗೆ ಕೈ ಜೋಡಿಸಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡ ಸದ್ಗುರು ವಾಸುದೇವ ಅವರನ್ನು ಭೇಟಿ ಮಾಡಿದೆ. ಸ್ವಲ್ಪ ಸಮಯ ಗುರೂಜಿ ಅವರೊಂದಿಗೆ ಕಾಲ ಕಳೆದ ಚಿತ್ರತಂಡ ಗುರೂಜಿ ಅವರನ್ನೇ ನಿಮ್ಮ ಮುಂದಿನ ನಿಲ್ದಾಣ ಯಾವುದು..? ಎಂದು ಕೇಳಿದೆ.
ಚಿತ್ರತಂಡ ಕೇಳಿದ ಪ್ರಶ್ನೆಗೆ ನನ್ನ ಮುಂದಿನ ನಿಲ್ದಾಣ 'ನಿರಂತರ' ಎಂದು ಸದ್ಗುರು ಉತ್ತರಿಸಿದ್ದಾರೆ. ಇದಕ್ಕೆ ದನಿಗೂಡಿಸಿದ ಚಿತ್ರತಂಡ ನಿಮ್ಮೊಂದಿಗೆ ನಾವಿದ್ದೇವೆ. ನಾವು ಎಂದೆಂದಿಗೂ ಕಾವೇರಿ, ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ‘ಮುಂದಿನ ನಿಲ್ದಾಣ’ ಸಿನಿಮಾ ಒಂದಲ್ಲಾ ಒಂದು ರೀತಿ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ಬಿಡುಗಡೆ ಮಾಡಲಾದ ‘ಮನಸೇ ಮಾಯ... ಹಾಡು ಯೂಟ್ಯೂಬ್, ಟಿಕ್ಟಾಕ್ಗಳಲ್ಲಿ ವೈರಲ್ ಆಗಿದೆ.