ಸ್ಯಾಂಡಲ್ವುಡ್ ಬಣ್ಣದ ಲೋಕದಲ್ಲಿ ಹಲವು ಯಶಸ್ವಿ ನಿರ್ಮಾಪಕರು ಅತ್ಯುತ್ತಮ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಕನ್ನಡ ಸಿನಿಮಾ ಲೋಕಕ್ಕೆ 'ಮುಂದಿನ ನಿಲ್ದಾಣ' ಎಂಬ ಸಿನಿಮಾ ಎಂಟ್ರಿಯಾಗುತ್ತಿದೆ. ನ.29ಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾ ನಿರ್ಮಾಣ ಮಾಡಿರೋದು ಪರಿಣಿತರಲ್ಲ. ಸಿನಿಮಾ ಲೋಕದ ಸ್ಪರ್ಶವೇ ಇಲ್ಲದ ಇಬ್ಬರು ಸಿಂಗಾಪುರದ ಸ್ಟಾರ್ಟ್ ಅಪ್ ಕಂಪನಿ ಮಾಲೀಕರು, ಇಂಗ್ಲೆಂಡ್ನ ಉದ್ಯಮಿಯೊಬ್ಬರು.
ಸಿಂಗಾಪುರದಲ್ಲಿ ಸ್ಟಾರ್ಟ್ ಅಪ್ ಕಂಪನಿ ಮಾಡಿರುವ ಸಾಫ್ಟ್ವೇರ್ ಇಂಜಿಯರ್ ಮುರಳೀಧರ್, ಶೇಷಾದ್ರಿ ಉಡುಪ, ಇಂಗ್ಲೆಂಡ್ನಲ್ಲಿ ವೈದ್ಯರಾಗಿರುವ ಸುರೇಶ್ ಕುಮಾರ್ ಮತ್ತು ಯುಎಇ ಶೇರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ತಾರನಾಥ್ ರೈ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಈ ನಾಲ್ವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಾಗಿದ್ದು, ಕನ್ನಡ ಸಿನಿಮಾ ನಿರ್ಮಿಸುವ ಕನಸನ್ನು ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾರೆ.