ಸಿದ್ಲಿಂಗು ನಂತರ ಲೂಸ್ ಮಾದ ಯೋಗಿ, ಚಿರಯೌವನೆ ಸುಮನ್ ರಂಗನಾಥ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಮತ್ತೆ 'ಪರಿಮಳ ಲಾಡ್ಜ್'ನಲ್ಲಿ ಒಂದಾಗಿದ್ದಾರೆ. ಅಲ್ಲದೆ ಈ ಜೋಡಿ ಪರಿಮಳ ಲಾಡ್ಜ್ಗೆ ಅಭಿನಯ ಚತುರ ನೀನಾಸಂ ಸತೀಶ್ ಅವರನ್ನು ಕರೆದುಕೊಂಡು ಬಂದಿದ್ದಾರೆ.
ನೀರ್ ದೋಸೆ ನಂತರ ನಿರ್ದೇಶಕ ವಿಜಯ ಪ್ರಸಾದ್ ಸದ್ಯ ತೋತಾಪುರಿ ಚಿತ್ರದಲ್ಲಿ ಬ್ಯುಝಿಯಾಗಿದ್ದು, ಇದರ ಗ್ಯಾಪ್ಲ್ಲೇ ಪರಿಮಳ ಲಾಡ್ಜ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನೀನಾಸಂ ಸತೀಶ್, ಲೂಸ್ ಮಾದ ಯೋಗಿ ಹಾಗೂ ಸುಮನ್ ರಂಗನಾಥ್ ನಟಿಸುತ್ತಿದ್ದು, ಈ ಸಿನಿಮಾ ಮುಹೂರ್ತ ನಿನ್ನೆ ನೆರವೇರಿದೆ.
ವಿಜಯನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಗಂಡ ಹೆಂಡತಿ ಖ್ಯಾತಿಯ ಸಂಜನಾ ಗರ್ಲಾನಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನು ಪರಿಮಳ ಲಾಡ್ಜ್ ಚಿತ್ರ ನಿರ್ದೇಶಕ ವಿಜಯಪ್ರಸಾದ್ ಅವರ ಹಿಂದಿನ ಚಿತ್ರಗಳಂತೆ ತುಂಬಾ ಹ್ಯೂಮರಸ್ ಆಗಿದ್ದು, ಒಂದು ಲಾಡ್ಜ್ನಲ್ಲಿ ನಡೆಯುವ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ನಿರ್ದೇಶಕರು.
ಪರಿಮಳ ಲಾಡ್ಜ್ ಚಿತ್ರದ ಮುಹೂರ್ತ ಈ ಚಿತ್ರದಲ್ಲಿ ಯೋಗಿ ಹಾಗೂ ಸತೀಶ್ ಸಲಿಂಗಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮನ್ ರಂಗನಾಥ್ ವಿಜಯ್ ಪ್ರಸಾದ್ ಅವರ ಸಿದ್ಲಿಂಗು, ನೀರ್ ದೋಸೆ ಹಾಗೂ ತೋತಾಪುರಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈಗ ನಾಲ್ಕನೇ ಬಾರಿಗೆ ವಿಜಯ ಪ್ರಸಾದ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ಯೂಟಿಫುಲ್ ಮನಸುಗಳು ಚಿತ್ರ ನಿರ್ಮಾಪಕ ಪ್ರಸನ್ನ ಪರಿಮಳ ಲಾಡ್ಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇಂದಿನಿಂದ ಮೈಸೂರಿನಲ್ಲಿ ಶೂಟಿಂಗ್ ಶುರುವಾಗಲಿದೆ.