ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಯವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ಚಿರು ಕೈಯಲ್ಲಿ ಇವೆ. ಈ ಗ್ಯಾಪ್ನಲ್ಲಿ ಚಿರು ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ.
ಚಿರಂಜೀವಿ ಸರ್ಜಾ ಹೊಸ ಚಿತ್ರಕ್ಕೆ ಮುಹೂರ್ತ: ಇಬ್ಬರು ನಾಯಕಿಯರೊಂದಿಗೆ ಚಿರು ಡ್ಯೂಯೆಟ್ - undefined
ಸಿಂಗ, ಜುಗಾರಿ ಕ್ರಾಸ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಚಿರಂಜೀವಿ ಸರ್ಜಾ ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಇಂದು ಮುಹೂರ್ತ ನೆರವೇರಿದೆ.
ಹೌದು, ಮದುವೆ ನಂತರ ಚಿರುಗೆ ಲಕ್ ಖುಲಾಸಿದಂತೆ ಕಾಣುತ್ತಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಸಿಂಗ' ಹಾಗೂ 'ಜುಗಾರಿ ಕ್ರಾಸ್' ಚಿತ್ರಗಳು ಮುಗಿಯುವ ಹಂತದಲ್ಲಿರುವಾಗಲೇ ಚಿರು ನಾಯಕನಾಗಿ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರ ಇಂದು ಸೆಟ್ಟೇರಿದೆ. ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ನಟ ಧ್ರುವ ಸರ್ಜಾ ಅಗಮಿಸಿ ಕ್ಯಾಮರಾ ಸ್ವಿಚ್ ಆನ್ ಮಾಡಿ ಅಣ್ಣನ ಚಿತ್ರಕ್ಕೆ ವಿಶ್ ಮಾಡಿದ್ರು. ಅಲ್ಲದೆ ಚಿರು ಮಡದಿ ಮೇಘನಾರಾಜ್ ಕೂಡಾ ಬಂದು ಪತಿಯ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಚಿತ್ರವನ್ನು 'ಧೈರ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಮೃತಾ ಅಯ್ಯಂಗಾರ್ ಹಾಗೂ ಅಕ್ಷತಾ ಶ್ರೀನಿವಾಸ್, ಚಿರು ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎರಡು ಹಳ್ಳಿಗಳ ನಡುವೆ ನಡೆಯುವ ಕಥೆಯಾಗಿದ್ದು ಚಿತ್ರದಲ್ಲಿ ಅಮೃತಾ ಡಾಕ್ಟರ್ ಪಾತ್ರದಲ್ಲಿ ಕಾಣಿಸುತ್ತಿದ್ದರೆ ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಅಕ್ಷತಾ ಕಾಣಿಸಲಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು ತಾರಾ, ಕಿಶೋರ್, ಅವಿನಾಶ್, ತರಂಗ ವಿಶ್ವ ಹಾಗೂ ಇನ್ನಿತರರು ನಟಿಸಲಿದ್ದಾರೆ. ಕಾಮಿಡಿ ರೋಲ್ನಲ್ಲಿ ಸಾಧುಕೋಕಿಲ ಕಮಾಲ್ ಮಾಡಲಿದ್ದು, ಅವರ ಜೊತೆಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ನಯನಾ, ಬಿರಾದಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ.