ಕರ್ನಾಟಕ

karnataka

ETV Bharat / sitara

ಕನ್ನಡದಲ್ಲಿ ಸಿದ್ಧವಾಗಲಿದೆ ಸೈನಿಕರ ಸಾಹಸ ಬಣ್ಣಿಸುವ ಚಿತ್ರ - undefined

ಕನ್ನಡದಲ್ಲಿ ಯೋಧರ ಕುರಿತಾದ ಚಿತ್ರಗಳು ಬೆರಳೆಣೆಕೆಯಷ್ಟು ತೆರೆಕಂಡಿವೆ. ಇದೀಗ ರಿಯಲ್ ಸೋಲ್ಜರ್ಸ್​​​​ ಸಾಹಸಗಾಥೆ ಹೇಳುವ ರಣಾಂಗಣ ಚಿತ್ರ ಸ್ಯಾಂಡಲ್​​ವುಡ್​ನಲ್ಲಿ ಸೆಟ್ಟೇರಿದೆ. ​

ರಣಾಂಗಣ ಚಿತ್ರಕ್ಕೆ ಮುಹೂರ್ತ

By

Published : Mar 15, 2019, 8:10 AM IST

ರಾಧಾರಮಣ ಸೀರಿಯಲ್ ಖ್ಯಾತಿಯ ಸ್ಕಂದ ಅಶೋಕ್ ನಾಯಕನಾಗಿ ಅಭಿನಯಿಸುತ್ತಿರುವ ಆ್ಯಕ್ಷನ್ ಚಿತ್ರ 'ರಣಾಂಗಣ' ಸೆಟ್ಟೇರಿದೆ.

ನಿನ್ನೆ ಬನಶಂಕರಿಯ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಸಾಂಗ್ಲಿಯಾನ, ನಿರ್ದೇಶಕ ಅನೂಪ್ ಭಂಡಾರಿ, ಚಿತ್ರ ಸಾಹಿತಿ ದೊಡ್ಡರಂಗೇಗೌಡ್ರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಗಮಿಸಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

ಸಾಂಗ್ಲಿಯಾನ ಕ್ಯಾಮರಾ ಸ್ವಿಚ್ ಆನ್ ಮಾಡಿದ್ರು. ಪ್ರವೀಣ್ ಶೆಟ್ಟಿ ಕ್ಲಾಪ್ ಮಾಡಿದ್ರು. ಅನೂಪ್ ಭಂಡಾರಿ ರಣಾಂಗಣ ಚಿತ್ರದ ಪೋಸ್ಟರ್ ಲಾಂಚ್ ಮಾಡಿ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಿದ್ರು.

ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಮಾಸ್ಟರ್ ಪೀಸ್ ಹುಡ್ಗಿ ಸಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ಸ್ಕಂದ ಅಶೋಕ್ ಯೋಧನ ಪಾತ್ರ ಹಾಗೂ ಸಾನ್ವಿ ಪತ್ರಕರ್ತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ರಣಾಂಗಣ ಚಿತ್ರಕ್ಕೆ ಮುಹೂರ್ತ

ಇನ್ನು ರಣಾಂಗಣ ರೋಹಿತ್ ನಿರ್ದೇಶನ ಮಾಡ್ತಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ರಿಯಲ್ ಯೋಧರಿಂದ ಸ್ಫೂರ್ತಿ ಪಡೆದು ನಾಲ್ಕು ವರ್ಗಳಿಂದ ಕಥೆ ಬರೆದಿದ್ದಾರಂತೆ ನಿರ್ದೇಶಕ ರೋಹಿತ್. ಮೇಜರ್ ಸಂದೀಪ್ ಉನ್ನಿಕೃಷ್ಣ ಅವರು ಸಹ ಚಿತ್ರಕ್ಕೆ ಸ್ಫೂರ್ತಿಯಂತೆ. ಅಲ್ಲದೆ ಇತ್ತೀಚಿಗೆ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿ ಹಾಗೂ ಭಾರತೀಯ ಯೋಧರ ಏರ್ ಸರ್ಜಿಕಲ್ ಸ್ಟ್ರೈಕ್ ಸಹ ಚಿತ್ರದಲ್ಲಿ ತೋರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

For All Latest Updates

TAGGED:

ABOUT THE AUTHOR

...view details