ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಏಕಲವ್ಯ' ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಲಾಗಿದೆ.ಈ ಹಿಂದೆ ಸಕ್ಸಸ್ ಕಂಡಿರುವ ಪ್ರೇಮ್ ಅವರ ಎಲ್ಲಾ ಚಿತ್ರಗಳಿಗೆ ಇಲ್ಲಿಯೇ ಮುಹೂರ್ತ ನಡೆದಿವೆ. ಇದೀಗ 'ಏಕಲವ್ಯ'ನ ಗೆಲುವಿಗೂ ಪ್ರೇಮ್ ಮಹದೇಶ್ವರನ ಮೊರೆ ಹೋಗಿದ್ದಾರೆ.
ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಸೆಟ್ಟೇರಿದ 'ಏಕಲವ್ಯ'! - ಏಕಲವ್ಯ
ಪ್ರೇಮ್ ನಿರ್ದೇಶನದ ಎಲ್ಲ ಚಿತ್ರಗಳಿಗೂ ಮಲೆ ಮಹದೇಶ್ವರನ ದೇವಸ್ಥಾನದಲ್ಲಿಯೇ ಮುಹೂರ್ತ ನಡೆದಿವೆ. ಇದೀಗ ಅವರ ಹೊಸ ಸಿನಿಮಾ 'ಏಕಲವ್ಯ' ಮುಹೂರ್ತ ಕಾರ್ಯ ಇಲ್ಲಿ ನೆರವೇರಿತು.
'ಏಕಲವ್ಯ' ಚಿತ್ರದ ಮೂಲಕ ಪತ್ನಿ ರಕ್ಷಿತಾ ಪ್ರೇಮ್ ಅವರ ಸಹೋದರ ಅಭಿಷೇಕ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಲಾಗುತ್ತಿದೆ. ಬಾಮೈದುನನ ಚೊಚ್ಚಲ ಚಿತ್ರಕ್ಕೆ ಒಳ್ಳೆಯ ಕಥೆ ಹೆಣೆದಿರುವ ಪ್ರೇಮ್,ಅದ್ಧೂರಿಯಾಗಿಯೇ 'ಏಕಲವ್ಯ'ನನ್ನು ತೆರೆಮೇಲೆ ತರಲಿದ್ದಾರೆ. ಇದೇ 20 ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.
ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಚಿತ್ರತಂಡದೊಂದಿಗೆ ಮಲೆ ಮಹದೇಶ್ವರನ ದೇವಸ್ಥಾನಕ್ಕೆ ತೆರಳಿರುವ ಪ್ರೇಮ್, ಸರಳವಾಗಿ ಮುಹೂರ್ತ ಕಾರ್ಯ ಮಾಡಿ ಮುಗಿಸಿದ್ದಾರೆ. ಈ ವೇಳೆ ಫೇಸ್ಬುಕ್ ಲೈವ್ನಲ್ಲಿ ಕಾಣಿಸಿಕೊಂಡಿದ್ದ ಅವರು, ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಮಾತಾಡಿದ್ರು. ನಮ್ಮಿಬ್ಬರನ್ನು ಕೈ ಹಿಡಿದು ಬೆಳೆಸಿದಂತೆ ನನ್ನ ಸಹೋದರನ ಮೇಲೆಯೂ ನಿಮ್ಮ ಆಶೀರ್ವಾದ ಇರಲಿ ಎಂದು ರಕ್ಷಿತಾ ಪ್ರೇಮ್ ನಾಡಿನ ಜನತೆಯಲ್ಲಿ ಮನವಿ ಮಾಡಿಕೊಂಡ್ರು.