ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಅನೇಕರು ಅವರಿಗೆ ವಿಶ್ ಮಾಡ್ತಿದ್ದು, ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ನಿವೃತ್ತಿ: ನಟಿ ಪ್ರಣಿತಾ ಟ್ವೀಟ್ ಹೀಗಿದೆ! - ನಟಿ ಪ್ರಣಿತಾ
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದು, ವಿವಿಧ ಸೆಲಿಬ್ರೆಟಿಗಳು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.
actor pranith
ಇದೀಗ ನಟಿ ಪ್ರಣಿತಾ ಸುಭಾಷ್ ಕೂಡ ಟ್ವೀಟ್ ಮಾಡಿದ್ದು, ಬರೋಬ್ಬರಿ 16 ವರ್ಷಗಳ ಕಾಲ ಭಾರತೀಯರ ಹೆಮ್ಮೆ ಹಾಗೂ ಸಂತೋಷಕ್ಕೆ ಕಾರಣವಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಪ್ರಣಿತಾ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸಪೋರ್ಟ್ ಮಾಡಿದ್ದಾರೆ. ಇದರ ಜತೆಗೆ ಪ್ರಕಾಶ್ ರಾಜ್, ತರುಣ್ ಸುಧೀರ್, ನಯನತಾರ, ಮೋಹನಲಾಲ್, ಪವನ್ ಒಡೆಯರ್ ಕೂಡ ಟ್ವೀಟ್ ಮಾಡಿ ಧೋನಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.