ಕರ್ನಾಟಕ

karnataka

ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ಧೋನಿ ಪುತ್ರಿ!

By

Published : Jan 2, 2021, 6:49 PM IST

ಕ್ರಿಕೆಟಿಗ ಎಂ.ಎಸ್.ಧೋನಿ ಪುತ್ರಿ ಜೀವಾ ನಟನಾ ಲೋಕಕ್ಕೆ ಕಾಲಿಟ್ಟಿದ್ದಾಳೆ.

ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ಧೋನಿ ಪುತ್ರಿ
ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ಧೋನಿ ಪುತ್ರಿ

ಸಾಮಾನ್ಯವಾಗಿ ಸ್ಟಾರ್​ ನಟ, ನಟಿಯರ ಮಕ್ಕಳು ನಟನಾ ಲೋಕಕ್ಕೆ ಬರುವುದನ್ನು ನೋಡಿದ್ದೇವೆ. ಆದ್ರೀಗ ಕ್ರಿಕೆಟ್​​ ಲೋಕದ ಜನಪ್ರಿಯ ತಾರೆ ಎಂ.ಎಸ್.​ಧೋನಿ ಪುತ್ರಿ ಜೀವಾ ನಟನಾ ಲೋಕಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾಳೆ.

ಹಾಗಾದ್ರೆ ಈ ಚಿಕ್ಕ ಮಗು ಯಾವ ಸಿನಿಮಾದಲ್ಲಿ ನಟಿಸುತ್ತಿದೆ ಎಂದು ಯೋಚಿಸ್ತಿದ್ದೀರಾ?. ಆ ಮಗು ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಬದಲಾಗಿ ಆಕೆ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದಾಳೆ.

ಓದಿ: ಉದ್ಯಮಿಯಾಗಿದ್ದಾರೆ ಕಿರುತೆರೆ ನಟಿ ಆಶಿತಾ ಚಂದ್ರಪ್ಪ!

ಹೌದು, ತಮ್ಮ ಕಂಪನಿಯ ಬಿಸ್ಕೆಟ್​​​ ಜಾಹೀರಾತಿನಲ್ಲಿ ಧೋನಿ ಪುತ್ರಿ ನಟಿಸುತ್ತಿದ್ದಾಳೆ ಎಂದು ಕಂಪನಿಯೇ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

ಜಾಹೀರಾತಿನಲ್ಲಿ ಮಗಳು ಜೀವಾ ಜೊತೆ ಧೋನಿ

ದೇಶದ ಕ್ರಿಕೆಟ್ ಕಂಡ ಅಪರೂಪದ ಕೂಲ್ ಕ್ಯಾಪ್ಟನ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಪತ್ನಿ ಮತ್ತು ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ಧೋನಿ ವ್ಯವಸಾಯವನ್ನೂ ಮಾಡುತ್ತಿದ್ದು, ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ದುಬೈಗೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಪತ್ನಿ ಸಾಕ್ಷಿ ಈಗಾಗಲೇ ಜಾಹೀರಾತು ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದು, ಪುತ್ರಿಯೂ ಪದಾರ್ಪಣೆ ಮಾಡಿದ್ದಾಳೆ.

ABOUT THE AUTHOR

...view details