ಸ್ಯಾಂಡಲ್ವುಡ್ನಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿನಿ ರಸಿಕರನ್ನು ಮೋಡಿ ಮಾಡುತ್ತಿವೆ. 1990ರಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಮಾಲಾಶ್ರೀ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ 'ಮೃತ್ಯುಂಜಯ' ಚಿತ್ರದ ಟೈಟಲ್ 30 ವರ್ಷಗಳ ಬಳಿಕೆ ಮತ್ತೆ ಸದ್ದು ಮಾಡುತ್ತಿದೆ.
30 ವರ್ಷಗಳ ನಂತರ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ 'ಮೃತ್ಯುಂಜಯ' ಚಿತ್ರದ ಟೈಟಲ್ - ಕನ್ನಡ ಚಿತ್ರರಂಗ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯಿಸಿದ್ದ ‘ಮೃತ್ಯುಂಜಯ’ ಚಿತ್ರದ ಟೈಟಲ್ 30 ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿದ್ದು, ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡುತ್ತಿದೆ.
ಹೌದು 'ಮೃತ್ಯುಂಜಯ' ಚಿತ್ರದ ಟೈಟಲ್ಅನ್ನು ಮರು ಬಳಕೆ ಮಾಡಲಾಗುತ್ತಿದ್ದು, ನಿಯೋಗಲ್ ರವಿ ಪೂಜಾರಿ ನಿರ್ದೇಶನದಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರವೊಂದು ಸಿದ್ಧವಾಗುತ್ತಿದೆ. ಜಲದುರ್ಗ ಕೋಟೆ, ಸುರಪುರ, ತಾವರೆಕೆರೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿದೆ. ಡಿಐ ಕೆಲಸವನ್ನು ಪೂರ್ತಿಗೊಳಿಸಿಕೊಂಡಿರುವ ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದೆ.
ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರ 'ಮೃತ್ಯುಂಜಯ'ದಲ್ಲಿ 12 ಪಾತ್ರಗಳು 12 ರಾಶಿಗಳ ಹೆಸರಿನಲ್ಲಿ ಕಾಣಿಸಿಕೊಳ್ಳಲಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಚಿತ್ರದಲ್ಲಿ ರುದ್ರಪ್ರಯಾಗ್, ಸ್ಪಟಿಕ, ನಾಗೇಂದ್ರ ಅರಸ್, ಹೊನ್ನಾವಳ್ಳಿ ಕೃಷ್ಣ, ಪೂರುಷೋತ್ತಮ್ ಹಾಗೂ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದು, ಕೆವಿನ್ ಎಂ. ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಅರುಣ್ ಭಾಗವತ್, ಶರಣ ಬಸವ ಹರ್ವಾಪುರ, ಧರ್ಮನ್ನ ಖಜೂರಿ, ಭರತ್ ಕುಮಾರ್ ಹಣ ಹೂಡಿದ್ದಾರೆ.