ನವದೆಹಲಿ : ಪ್ರಸ್ತುತ ಮಿಸೆಸ್ ಅಮೆರಿಕನ್ ಆಗಿರುವ ಶೈಲಿನ್ ಫೋರ್ಡ್ ಅವರು ಜನವರಿ 15ರಂದು ಅಮೆರಿಕದ ಲಾಸ್ ವೇಗಾಸ್‌ನ ನೆವಾಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ನೂತನ ಮಿಸೆಸ್ ವರ್ಲ್ಡ್- 2022 ಆಗಿ ಹೊರಹೊಮ್ಮಿದ್ದಾರೆ.
ಇದೇ ಸ್ಪರ್ಧೆಯ ಉಡುಪು ವಿಭಾಗದಲ್ಲಿ ಭಾರತದ ನವದೀಪ್ ಕೌರ್ ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಿಸೆಸ್ ವರ್ಲ್ಡ್ ಆಗಿ ಹೊರಹೊಮ್ಮಿದ ಶೈಲಿನ್ ಫೋರ್ಡ್ ಅವರು 37 ವರ್ಷದವರಾಗಿದ್ದು, ಸ್ಪರ್ಧೆಯಲ್ಲಿದ್ದ ಸುಮಾರು 57ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸೆಸ್ ವರ್ಲ್ಡ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಮಿಸೆಸ್ ವರ್ಲ್ಡ್ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಯುಎಇಯನ್ನು ಪ್ರತಿನಿಧಿಸಿದ ದೇಬಂಜಲಿ ಕಾಮ್ಸ್ಸ್ತ್ರ ಅವರು ಎರಡನೇ ರನ್ನರ್ ಅಪ್ ಆಗಿದ್ದು, ಮೊದಲ ರನ್ನರ್ ಅಪ್ ಪಟ್ಟವನ್ನು ಜೋರ್ಡಾನ್ನ ಜಾಕ್ಲಿಪ್ ಸ್ಟಾಪ್ ಮುಡಿಗೇರಿಸಿಕೊಂಡಿದ್ದಾರೆ.
ಬೆಸ್ಟ್ ನ್ಯಾಶನಲ್ ಕಾಸ್ಟ್ಯೂಮ್ ಪ್ರಶಸ್ತಿಯನ್ನು ಗೆದ್ದಿರುವ ಮಿಸೆಸ್ ಇಂಡಿಯಾ ವರ್ಲ್ಡ್ ಆಗಿರುವ ನವದೀಪ್ ಕೌರ್ ಈ ಸ್ಪರ್ಧೆಯಲ್ಲಿ ಟಾಪ್-15 ರಲ್ಲಿದ್ದರು. ಕಲಾವಿದೆ ಎಗ್ಗೀ ಜಾಸ್ಮಿನ್ ರೂಪಿಸಿದ ಕುಂಡಲಿನಿ ಚಕ್ರದ ಉಡುಪಿಗಾಗಿ ಅವರು ಈ ಪ್ರಶಸ್ತಿ ಗೆದ್ದಿದ್ದರು. ಈ ಉಡುಪು ನೋಡಲು ದೈತ್ಯಾಕಾರದ ಹಾವಿನ ತಲೆಯನ್ನು ಹೋಲುತ್ತದೆ.
ಇದನ್ನೂ ಓದಿ:ಪ್ರೀತಿ ಜಿಂಟಾಗೆ 'ಮಮ್ಮಿ ವೈಬ್ಸ್' ಫೋಟೋಗಳು ಸಖತ್ ವೈರಲ್.. ತನ್ನ ಮಕ್ಕಳ ಬಗ್ಗೆ ಹೇಳಿದ್ದು ಹೀಗೆ!