ಕರ್ನಾಟಕ

karnataka

ETV Bharat / sitara

'ಅಧ್ಯಕ್ಷ IN ಅಮೆರಿಕ' ಆಡಿಯೋ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ - ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಶರಣ್ ಅಭಿನಯದ 'ಅಧ್ಯಕ್ಷ IN ಅಮೆರಿಕ' ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶರಣ್ ಜೊತೆ ರಾಗಿಣಿ ದ್ವಿವೇದಿ ಕೂಡಾ ಸಿನಿಮಾದಲ್ಲಿ ನಟಿಸಿದ್ದು ಚಿತ್ರ ಅಕ್ಟೋಬರ್​​​ 4 ರಂದು ಬಿಡುಗಡೆಯಾಗುತ್ತಿದೆ.

'ಅಧ್ಯಕ್ಷ IN ಅಮೇರಿಕಾ' ಆಡಿಯೋ

By

Published : Sep 23, 2019, 1:04 PM IST

ರ್‍ಯಾಂಬೋ ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ 'ಅಧ್ಯಕ್ಷ IN ಅಮೆರಿಕ' ಅಕ್ಟೋಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಸಿನಿಮಾದ ಪ್ರಮೋಷನ್​​​​ನಲ್ಲಿ ಬ್ಯುಸಿ ಇದೆ. ಈ ನಡುವೆ ಆಡಿಯೋ ಕೂಡಾ ಬಿಡುಗಡೆ ಮಾಡಿದೆ.

'ಅಧ್ಯಕ್ಷ IN ಅಮೇರಿಕಾ' ಆಡಿಯೋ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಜೊತೆ ಚಿತ್ರತಂಡ

ನಿನ್ನೆ ನಗರದ ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಗಮಿಸಿ ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಚಿತ್ರವನ್ನು ಸಂಭಾಷಣೆಗಾರ ಯೋಗಾನಂದ್ ನಿರ್ದೇಶಿಸಿದ್ದಾರೆ. ಆಂಧ್ರ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿ ವಿಶ್ವ ಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಹೆಸರಿಗೆ ತಕ್ಕಂತೆ ಸಿನಿಮಾವನ್ನು ಬಹುತೇಕ ಅಮೆರಿಕದಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ಶರಣ್ ಈ ಹಿಂದೆ ಅಭಿನಯಿಸಿದ 'ಅಧ್ಯಕ್ಷ' ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿದೆ.

ಶರಣ್, ರಾಗಿಣಿ

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತಬಲ ನಾಣಿ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ಬೆಳವಾಡಿ ,ಶಿವರಾಜ್ ಕೆ.ಆರ್​​​​.ಪೇಟೆ, ಪದ್ಮಜಾ ರಾವ್, ಅಶೋಕ್ ,ಅರುಣ ಬಾಲರಾಜ್, ಮಕರಂದ ದೇಶಪಾಂಡೆ, ಚಿತ್ರ ಶೆಣೈ ಹಾಗೂ ಇನ್ನಿತರರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕೂಡಾ 'ಅಧ್ಯಕ್ಷ' ಚಿತ್ರದಂತೆ ಮೋಡಿ ಮಾಡಲಿದೆಯಾ ಕಾದು ನೋಡಬೇಕು.

ABOUT THE AUTHOR

...view details