ಕರ್ನಾಟಕ

karnataka

ETV Bharat / sitara

25 ಪೈಸೆಯಿಂದ 250 ರೂಪಾಯಿವರೆಗೆ...ಸಿನಿಮಾ ಟಿಕೆಟ್​ ಬೆಲೆಯ ಜರ್ನಿ ಇದು...! - Single screen ticket fare

ಡಾ. ರಾಜ್​ಕುಮಾರ್ ಅವರ ಕಾಲದಲ್ಲಿ ಒಂದು ಸಿನಿಮಾ ಟಿಕೆಟ್ ಬೆಲೆ 25-50 ಪೈಸೆ ಇತ್ತು. 1980 ವರೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ 2 ರೂಪಾಯಿ ಇತ್ತು. ಆದರೆ ಈಗ ಟಿಕೆಟ್ ಬೆಲೆ 250 ರೂಪಾಯಿವರೆಗೂ ಬಂದು ನಿಂತಿದೆ.

Movie ticket fare
ಸಿನಿಮಾ ಟಿಕೆಟ್ ದರ

By

Published : Jul 23, 2020, 5:07 PM IST

ಆಗ್ಗಾಗ್ಗೆ ಮನೆಯಲ್ಲಿ ಹಿರಿಯರು ಒಂದು ಮಾತು ಹೇಳುತ್ತಿರುತ್ತಾರೆ. ನಮ್ಮ ಕಾಲವೇ ಎಷ್ಟೋ ಚೆನ್ನಾಗಿತ್ತು ಎಂಬ ಮಾತು ಬಹುತೇಕ ಎಲ್ಲರ ಮನೆಯಲ್ಲೂ ಕೇಳಿರುತ್ತೇವೆ. ನಮ್ಮ ಕಾಲದಲ್ಲಿ 25 ಪೈಸೆಗೆ ಸೋಪು, 1 ಆಣೆಗೆ ಬೆಂಕಿಪೊಟ್ಟಣ, 5 ಪೈಸೆಗೆ ತಿಂಡಿ ಕೂಡಾ ಸಿಗುತ್ತಿದ್ದು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಆ ಹಣಕ್ಕೂ ಅವರಿಗೆ ಅಷ್ಟೇ ಕಷ್ಟ ಇತ್ತು ಎನ್ನುವುದು ಸತ್ಯ ಸಂಗತಿ.

ಸಿನಿಮಾ ಟಿಕೆಟ್ ದರ

ಇನ್ನು ವರನಟ ಡಾ. ರಾಜ್​ಕುಮಾರ್ ಅವರು ಚಿತ್ರರಂಗಕ್ಕೆ ಬಂದಾಗ ಅಭಿಮಾನಿಗಳು 25,50 ಪೈಸೆ ನೀಡಿ ಟೆಂಟ್​​ನಲ್ಲಿ ಸಿನಿಮಾ ನೋಡುತ್ತಿದ್ದರಂತೆ. ಆದರೆ ಆ ಕಾಲ ಈಗ ಬದಲಾಗಿದೆ. ಟೆಂಟ್ ಜಾಗದಲ್ಲಿ ಈಗ ಥಿಯೇಟರ್, ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್​ ಅಂತೆಲ್ಲಾ ಬಂದಿವೆ. ಥಿಯೇಟರ್​ ದರ ಸಿಂಗಲ್ ಸ್ಕ್ರೀನ್​​ನಲ್ಲಿ 100ಕ್ಕಿಂತ ಅಧಿಕವಾಗಿದೆ. ಇನ್ನು ಮಾಲ್​​ಗಳಲ್ಲಿ ಕೇಳಬೇಕೆ..? ಅವರು ನಿರ್ಧರಿಸಿದ್ದೇ ಟಿಕೆಟ್ ಬೆಲೆ. 1950 ರಿಂದ 1980 ವರೆಗೆ ಭಾರತೀಯ ಚಿತ್ರಮಂದಿರಗಳ ಟಿಕೆಟ್ ಬೆಲೆ ಒಬ್ಬರಿಗೆ ಕೇವಲ 2-3 ರೂಪಾಯಿ ಇತ್ತು.

ಸಿನಿಮಾ ಟಿಕೆಟ್ ದರ

ಈಗಿನ ಪರಿಸ್ಥಿತಿಯಲ್ಲಿ100 ರೂಪಾಯಿ ಟಿಕೆಟ್ ಬೆಲೆಗೆ ನಿರ್ಮಾಪಕನಿಗೆ ದೊರೆಯುವುದು 30 ರೂಪಾಯಿ. ಉಳಿದ ಹಣದಲ್ಲಿ ಚಿತ್ರಮಂದಿರದ ಬಾಡಿಗೆ, ವಿತರಕರ ಕಮಿಷನ್, ಜಿಎಸ್​​​ಟಿ ಕೂಡಾ ಕಡಿತಗೊಳ್ಳುತ್ತದೆ. ಒಟಿಟಿಯಲ್ಲಿ ಇದರ ಜೊತೆಗೆ 25-100 ರೂಪಾಯಿ ನೀಡಿ ಮನೆಯಲ್ಲೇ ಮನರಂಜನೆ ಪಡೆಯುವ ವ್ಯವಸ್ಥೆ ಕೂಡಾ ಬಂದಿದೆ. 80 ರ ದಶಕದ ಸಿನಿಮಾ ಟಿಕೆಟ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಮೂಲಕ ಅಂದಿನ ದಿನವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

ABOUT THE AUTHOR

...view details