ಟೈಟಲ್ನಿಂದಲೇ ಕುತೂಹಲ ಕೆರಳಿಸಿರುವ ನಟಿ ಮಯೂರಿ ಅಭಿನಯದ 'ಮೌನಂ' ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಹೊಂದಿರುವ ಮೌನಂ ಚಿತ್ರದಲ್ಲಿ ತಂದೆ ಮಗನ ಬಾಂಧವ್ಯದ ಕಥೆ ಇದೆ. ತಂದೆಯ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಅಭಿನಯಿಸಿದ್ದು, ಹಿಂದೆಂದೂ ನಿಭಾಯಿಸದ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರಂತೆ.
'ಮೌನಂ' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಲ್ಲದೆ ಚಿತ್ರದಲ್ಲಿನ ಅವಿನಾಶ್ ಮಗನ ಪಾತ್ರದಲ್ಲಿ ಕಿರುತೆರೆ ನಟ ಬಾಲಾಜಿ ಶರ್ಮಾ ನಟಿಸಿದ್ದು, ಚಿತ್ರದಲ್ಲಿ ಬಾಲಾಜಿ ಪಾತ್ರ ಐದು ಶೇಡ್ನಲ್ಲಿದೆಯಂತೆ. ಈ ಚಿತ್ರದಲ್ಲಿ ನಟಿ ಮಯೂರಿ ಕಾಲೇಜ್ ಹುಡುಗಿ ಪಾತ್ರದಲ್ಲಿ ಕಾಣಿಸಿದ್ದು, ಮುಗ್ಧ ಮನಸ್ಸಿನ ಹೆಣ್ಣು ಮಗಳ ಪಾತ್ರ ಇದಾಗಿದೆ. ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.
ನವ ನಿರ್ದೇಶಕ ರಾಜ್ ಪಂಡಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಹರಿ ನಿರ್ಮಾಣ ಮಾಡಿದ್ದಾರೆ.