ಕರ್ನಾಟಕ

karnataka

ETV Bharat / sitara

ಅಮ್ಮಾ ನಿನ್ನ ಹಾಲೇ ಮಕ್ಕಳಿಗೆ ಅಮೃತ, ಬಾಲಿವುಡ್​ ನಟಿಯಿಂದ ಮಾದರಿ ಕೆಲಸ - Neha Dupiah

ಮಗುವಿನ ಬೆಳವಣಿಗೆಯಲ್ಲಿ ತಾಯಿ ಎದೆಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಬಾಲಿವುಡ್​ ನಟಿ ನೇಹಾ ದುಪಿಯಾ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಬಾಲಿವುಡ್ ನಟಿ ಕಮ್​ ರೂಪರ್ಶಿ ನೇಹಾ ದುಪಿಯಾ

By

Published : Aug 3, 2019, 12:56 PM IST

ಮುಂಬೈ:ಬಾಲಿವುಡ್ ನಟಿ ಕಮ್​ ರೂಪರ್ಶಿ ನೇಹಾ ದುಪಿಯಾ ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗುವ ಕೆಲಸ ಮಾಡುತ್ತಿದ್ದು, ವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಪ್ರಾರಂಭವಾದ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಎಂಟು ತಿಂಗಳ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದಾರೆ.


ಈ ಮೂಲಕ ನೇಹಾ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಮಹತ್ವವನ್ನು ಸಾರಿ ಹೇಳಿದ್ದು, ತಮ್ಮ ಮಗಳು ಮೆಹರ್​ಗೆ ಹಾಲುಣಿಸಿ ವಿಡಿಯೋವನ್ನು ಇನ್​​​​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಸ್ವಾತಂತ್ರ್ಯ ಹೊಂದಿರಬೇಕು ಎಂದಿರುವ ನೇಹಾ, ಇನ್​​ಸ್ಟಾಗ್ರಾಂನಲ್ಲಿ "#freedomtofeed -ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಹಾಲುಣಿಸುತ್ತಲೇ ತಾಯಿ ಹಾಲು ಮಕ್ಕಳಿಗೆ ಮೊದಲ ಆರು ತಿಂಗಳು ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಕೆಲವು ಮಹಿಳೆಯರು ಹಾಲುಣಿಸಿದರೆ ತಮ್ಮ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದುಕೊಳ್ಳುತ್ತಿದ್ದಾರೆ. ಆದರೆ ಇದು ತಪ್ಪು ಎಂದು ಸ್ವತ: ಮಾಡೆಲ್​ ಆಗಿರುವ ನೇಹಾ ಮನವರಿಕೆ ಮಾಡಿದ್ದಾರೆ.

ಬಾಲಿವುಡ್ ನಟಿ ಕಮ್​ ರೂಪರ್ಶಿ ನೇಹಾ ದುಪಿಯಾ

ಇನ್ನೂ ಈ ವಿಡಿಯೋದಲ್ಲಿ ಮೆಹರ್ ದುಪಿಯಾ ಬೇಡಿ ಜನಿಸಿದ ದಿನಾಂಕ 2018 ರ ನವೆಂಬರ್ 18 ರಿಂದ ಏನೆಲ್ಲ ಮಾಡಲಾಗಿದೆ ಎಂಬುದನ್ನು ವಿವರಿಸಲಾಗಿದೆ. ಮಗುವಿನ ಆರೋಗ್ಯ ಮತ್ತು ಪೋಷಣೆಗಾಗಿ ಹಲವಾರು ರಾತ್ರಿ ನಿದ್ದೆ ಇಲ್ಲದೇ ಕಳೆಯಬೇಕಾಗುತ್ತೆ ಮತ್ತು ತಾಯಿ ಮಗುವಿನ ನಡುವಿನ ಸಂಬಂಧ ಪ್ರೀತಿ ವಾತ್ಸಲ್ಯವನ್ನು ಎಂತಹದ್ದು, ಈ ಸಮಯದಲ್ಲಿ ತಾಯಿಯ ಮೆದುಳು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಎಂಬುದನ್ನು ನೇಹಾ ವಿವರಿಸಿದ್ದಾರೆ.‌ ಇನ್ನೂ ಮತ್ತೊಬ್ಬ ನಟಿ ಸಮೀರಾ ರೆಡ್ಡಿ ಸಹ ಸ್ತನ್ಯಪಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.

ABOUT THE AUTHOR

...view details