ಕರ್ನಾಟಕ

karnataka

ETV Bharat / sitara

ಮೂರು ಗಂಟು ಧಾರಾವಾಹಿ ವಿಕ್ರಮಾದಿತ್ಯನ ಬಣ್ಣದ ಲೋಕ ಹೀಗಿದೆ ನೋಡಿ - ಕಲರ್ಸ್ ಕನ್ನಡ ವಾಹಿನಿ

ಮೂರು ಗಂಟು ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ವಿಕ್ರಮಾದಿತ್ಯನಾಗಿ ಹುಡುಗಿಯರ ಮನಸ್ಸು ಕದ್ದ ಹುಡುಗನ ಹೆಸರು ಅನಿರುದ್ಧ್ ಬಾಲಾಜಿ.

more about anirudh balaji
ಮೂರು ಗಂಟು ಧಾರಾವಾಹಿಯ ವಿಕ್ರಮಾಧಿತ್ಯ ಯಾರು ಗೊತ್ತಾ?

By

Published : Mar 3, 2020, 2:59 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೂರು ಗಂಟು ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ವಿಕ್ರಮಾದಿತ್ಯನಾಗಿ ಹುಡುಗಿಯರ ಹೃದಯ ಕದ್ದ ಹುಡುಗನ ಹೆಸರು ಅನಿರುದ್ಧ್ ಬಾಲಾಜಿ. ಜೀ ಕನ್ನಡ ವಾಹಿನಿಯ ಸಾಗರ ಸಂಗಮ ಧಾರಾವಾಹಿಯ ನಾಯಕನಾಗಿ ನಟನಾ ಪಯಣ ಆರಂಭಿಸಿದ್ದ ಅನಿರುದ್ಧ್ ಬಾಲಾಜಿಗೆ ಆ್ಯಕ್ಟಿಂಗ್​ನಲ್ಲಿ ವಿಶೇಷ ಒಲವು.

ಅನಿರುದ್ಧ್ ಬಾಲಾಜಿ

ಮೂರು ಗಂಟು ಧಾರಾವಾಹಿಯಲ್ಲಿ ಸ್ಟಾರ್ ನಟನಾಗಿ ಗಮನ ಸೆಳೆದಿರುವ ಅನಿರುದ್ಧ ಬಾಲಾಜಿ, ಧಾರಾವಾಹಿ ಒಳಗೆ ನಡೆಯುವ ಶುಭವಿವಾಹ ಎಂಬ ರಿಯಾಲಿಟಿ ಶೋ ಮೂಲಕ ಅಭಿಮಾನಿ ಓರ್ವಳನ್ನು ಮದುವೆಯಾಗುವ ಸಂದರ್ಭ ಸೃಷ್ಟಿಯಾಗಲಿದೆ. ಆದರೆ ಅವನಿಗೆ ಇಷ್ಟವಿಲ್ಲದಿದ್ದರೂ ಮದುವೆಯಾಗ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನಾಗಬಹುದು ಎಂಬುದು ಕುತೂಹಲ.

ಅನಿರುದ್ಧ್ ಬಾಲಾಜಿ

ನಟನೆಯಲ್ಲೇ ಮುಂದಿವರಿಯಬೇಕು ಎಂದು ನಿರ್ಧರಿಸಿದ ಅನಿರುದ್ಧ್, ಮನೆಯವರ ಒಪ್ಪಿಗೆ ಪಡೆದ ಬಳಿಕ ತರಬೇತಿ ಪಡೆಯಲು ಹಾರಿದ್ದು ದೂರದ ಮುಂಬೈಗೆ. ಅಲ್ಲಿ ನಟನೆಯಲ್ಲಿ ಡಿಪ್ಲೋಮಾ ಪದವಿ ಪಡೆದ ನಟ ಮುಂದೆ ಚೆನ್ನೈಗೆ ಹೋಗಿ ಸಾಹಸದ ಕುರಿತು ಪರಿಣಿತಿಯನ್ನು ಪಡೆದರು.

ಅನಿರುದ್ಧ್ ಬಾಲಾಜಿ

ನಟನಾ ರಂಗದಲ್ಲಿ ಪಳಗಿದ ಅನಿರುದ್ಧ್ ಮುಂದೆ ಸಾಗರ ಸಂಗಮ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಇದೀಗ ಸೂಪರ್ ಸ್ಟಾರ್ ವಿಕ್ರಮಾದಿತ್ಯನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ಅನಿರುದ್ಧ್ ಬಾಲಾಜಿ

ಕಥೆ, ಚಿತ್ರಕಥೆ, ನಿರ್ದೇಶನ - ಪುಟ್ಟಣ್ಣ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅನಿರುದ್ಧ್ ಬಾಲಾಜಿ ಕಿರುತೆರೆಯ ಜೊತೆ ಜೊತೆಗೆ ಬೆಳ್ಳಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಅದರಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಅನಿರುದ್ಧ್ ಮುಂದೆ ದೊರೆ ಭಗವಾನ್​ರ ಆಡುವ ಗೊಂಬೆಯಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಶಿವಂನಲ್ಲಿ ನಟಿಸಿರುವ ಈತ ಸದ್ಯ ಕಿರುತೆರೆಯ ವೀಕ್ಷಕರ ಪಾಲಿನ ಸೂಪರ್ ಸ್ಟಾರ್.

ABOUT THE AUTHOR

...view details