ಕರ್ನಾಟಕ

karnataka

ETV Bharat / sitara

ಭಾರತಕ್ಕೆ ಹಿಂತಿರುಗಲು ಸಹಾಯ ಕೋರಿ ಸರ್ಕಾರಕ್ಕೆ ಮನವಿ ಮಾಡಿದ ಮಲಯಾಳಂ ಚಿತ್ರತಂಡ - Mollywood movie team seek help to come back India

ಭಾರತದಲ್ಲಿ ಕಳೆದ 15 ದಿನಗಳಿಂದ ಸಿನಿಮಾ ಚಿತ್ರೀಕರಣ ಬಂದ್ ಆಗಿದ್ದರೆ ಪೃಥ್ವಿರಾಜ್ ಅಭಿನಯದ ​​​​​​​​​​​​​​'ಆಡು ಜೀವಿತಂ' ಸಿನಿಮಾ ಚಿತ್ರೀಕರಣ ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿತ್ತು. ಆದರೆ ಇದೀಗ ಕೊರೊನಾ ಭೀತಿಯಿಂದ ಜೋರ್ಡಾನ್ ಸರ್ಕಾರ ಕೂಡಾ ನಿರ್ಬಂಧ ಹೇರಿರುವುದರಿಂದ ಅಲ್ಲಿ ಕೂಡಾ ಚಿತ್ರೀಕರಣ ನಿಂತಿದೆ. ಇದೀಗ ಚಿತ್ರತಂಡ ಭಾರತಕ್ಕೆ ವಾಪಸಾಗಲು ಕೇರಳ ಸರ್ಕಾರದ ಸಹಾಯ ಬೇಡಿದೆ.

Mollywood movie team
ಮಲಯಾಳಂ ಚಿತ್ರತಂಡ

By

Published : Apr 1, 2020, 5:20 PM IST

ಲಾಕ್​ ಡೌನ್​​​ನಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿದ್ದ ಈ ಸಮಯದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಅಭಿನಯದ ಸಿನಿಮಾವೊಂದಕ್ಕೆ ಮೊನ್ನೆಯವರೆಗೂ ಚಿತ್ರೀಕರಣ ಜರುಗಿತ್ತು. ಅರೆ, ದೊಡ್ಡ ದೊಡ್ಡ ಸ್ಟಾರ್​​​​​​ಗಳ ಸಿನಿಮಾ ಚಿತ್ರೀಕರಣ ನಿಂತಿರುವ ವೇಳೆ ಈ ಸಿನಿಮಾ ಚಿತ್ರೀಕರಣ ಹೇಗೆ ಸಾಧ್ಯ ಅಂದುಕೊಳ್ಳುತ್ತಿದ್ದೀರ..?

ಪೃಥ್ವಿರಾಜ್ ಅಭಿನಯದ ಈ ಸಿನಿಮಾ ಚಿತ್ರೀಕರಣ ಜರುಗುತ್ತಿದ್ದು ಪಶ್ಚಿಮ ಏಷ್ಯಾದ ಅರಬ್ ಪ್ರದೇಶದ ಜೋರ್ಡಾನ್​​​​ನಲ್ಲಿ. ಭಾರತದಲ್ಲಿ ಕಳೆದ 15 ದಿನಗಳಿಂದ ಸಿನಿಮಾ ಚಿತ್ರೀಕರಣ ಬಂದ್ ಆಗಿದ್ದರೆ ಪೃಥ್ವಿರಾಜ್ ಅಭಿನಯದ ​​​​​​​​​​​​​​'ಆಡು ಜೀವಿತಂ' ಸಿನಿಮಾ ಚಿತ್ರೀಕರಣ ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿತ್ತು. ಆದರೆ ಇದೀಗ ಕೊರೊನಾ ಭೀತಿಯಿಂದ ಜೋರ್ಡಾನ್ ಸರ್ಕಾರ ಕೂಡಾ ನಿರ್ಬಂಧ ಹೇರಿರುವುದರಿಂದ ಅಲ್ಲಿ ಕೂಡಾ ಚಿತ್ರೀಕರಣ ನಿಂತಿದೆ. ಇದೀಗ ಚಿತ್ರತಂಡ ಭಾರತಕ್ಕೆ ವಾಪಸಾಗಲು ಕೇರಳ ಸರ್ಕಾರದ ಸಹಾಯ ಬೇಡಿದೆ.

​​​​​​​'ಆಡು ಜೀವಿತಂ' ಚಿತ್ರತಂಡ ಈ ವಿಷಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಟ್ಟಿಸುವಂತೆ ಕೇರಳ ಫಿಲ್ಮ್ ಚೇಂಬರ್​​​​​​ಗೆ ಇಮೇಲ್ ಮಾಡಿದೆ. ಚಿತ್ರತಂಡದಲ್ಲಿ ಸುಮಾರು 56 ಮಂದಿ ಇದ್ದು ಚಿತ್ರತಂಡ ಕಳಿಸಿರುವ ಇ ಮೇಲನ್ನು ಸಂಬಂಧಿಸಿದ ಶಾಸಕರು ಹಾಗೂ ಮಾಜಿ ನಟ, ರಾಜ್ಯಸಭೆ ಸದಸ್ಯ ಸುರೇಶ್ ಗೋಪಿ ಅವರಿಗೆ ಕಳಿಸಲಾಗಿದೆ ಎಂದು ಕೇರಳ ಫಿಲ್ಮ್​ ಚೇಂಬರ್ ಸದಸ್ಯರು ಹೇಳಿದ್ದಾರೆ. ಮಗನೊಂದಿಗೆ ನಾನು ಸೋಮವಾರ ಮಾತನಾಡಿದ್ದು , ಆದಷ್ಟು ಬೇಗ ನನ್ನ ಮಗ, ನಿರ್ದೇಶಕ ಹಾಗೂ ಚಿತ್ರತಂಡದ ಇತರ ಸದಸ್ಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವಂತೆ ಪೃಥ್ವಿರಾಜ್ ತಾಯಿ , ಹಿರಿಯ ನಟಿ ಮಲ್ಲಿಕಾ ಸುಕುಮಾರನ್​​ ಕೂಡಾ ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

'ಆಡು ಜೀವಿತಂ' ಸಿನಿಮಾ ಚಿತ್ರೀಕರಣ ಜೋರ್ಡಾನ್ ಮರುಭೂಮಿಯಲ್ಲಿ ಜರುಗುತ್ತಿದ್ದು ಶೂಟಿಂಗ್ ನಡೆಯುತ್ತಿಲ್ಲ ಎಂಬುದನ್ನು ಹೊರತುಪಡಿಸಿ ಚಿತ್ರತಂಡಕ್ಕೆ ಯಾವುದೇ ತೊಂದರೆ ಆಗಿಲ್ಲ. ಇನ್ನು ಒಂದು ವಾರಗಳ ಕಾಲ ಅಲ್ಲಿ ಶೂಟಿಂಗ್ ಮುಗಿಸಿ, ಚಿತ್ರತಂಡ ಅಲ್ಜೀರಿಯಾ ಹೊರಡಲು ಶೆಡ್ಯೂಲ್ ಮಾಡಿತ್ತು. ಆದರೆ ಎಲ್ಲೆಡೆ ಕೊರೊನಾ ಆತಂಕ ಇರುವುದರಿಂದ ಜೋರ್ಡಾನ್ ಸರ್ಕಾರ ಚಿತ್ರೀಕರಣ ಮುಂದುವರೆಸಲು ಅನುಮತಿ ನೀಡಿಲ್ಲ ಎಂದು ಮಲ್ಲಿಕಾ ಸುಕುಮಾರನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ​​​​​​​.

'ಬೆನಿಮಿನ್​​​​​​​​​​​​​​' ವಿರಚಿತ ಮಲಯಾಳಂ ಖ್ಯಾತ ಕಾದಂಬರಿಯೊಂದನ್ನು ಆಧರಿಸಿ ​​​​​​​​​​​​​​'ಆಡು ಜೀವಿತಂ' ಚಿತ್ರವನ್ನು ತಯಾರಿಸಲಾಗುತ್ತಿದೆ. ಚಿತ್ರದಲ್ಲಿ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಖ್ಯಾತ ನಿರ್ದೇಶಕ ಬ್ಲೆಸ್ಸಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ಧಾರೆ. 2004 ರಲ್ಲಿ ಬ್ಲೆಸಿ ಮೊದಲ ಬಾರಿಗೆ ​​​​​​​​​​​​​​'ಕಾಜ್ಚಾ​​​​​​​​​​​​​​' ಚಿತ್ರವನ್ನು ನಿರ್ದೇಶಿಸಿದರು. ನಂತರ 2005 ರಲ್ಲಿ ​​​​​​​​​​​​​​'ತನ್ಮತ್ರಾ​​​​​​​​​​​​​​' 2011 ರಲ್ಲಿ ​​​​​​​​​​​​​​'ಪ್ರಾಣಾಯಂ​​​​​​​​​​​​​​' ಸಿನಿಮಾವನ್ನು ನಿರ್ದೇಶಿಸಿರುವ ಬ್ಲೆಸಿ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details