ಕರ್ನಾಟಕ

karnataka

ETV Bharat / sitara

ಆ.12ರಂದು 'ಮರಕ್ಕರ್: ಅರಬಿಕಡಲಿಂಟೆ ಸಿಂಹಂ' ಚಿತ್ರ ಬಿಡುಗಡೆ

ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

Mohanlal
ನಟ ಮೋಹನ್ ಲಾಲ್

By

Published : Jun 24, 2021, 11:01 AM IST

ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮರಕ್ಕರ್: ಅರಬಿಕಡಲಿಂಟೆ ಸಿಂಹಂ'. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ಮಾರ್ಚ್​ ತಿಂಗಳಿನಲ್ಲಿ ಈ ಚಿತ್ರ ಬಿಡುಗಡೆಯಾಗಬೇಕಿತ್ತು.

ಮೂರು ವಾರಗಳ ಕಾಲ ಯಾವುದೇ ಸ್ಪರ್ಧಿ ಇಲ್ಲ:

ಕೇರಳದ ಚಿತ್ರಪ್ರದರ್ಶಕರು ಮತ್ತು ಚಿತ್ರ ನಿರ್ಮಾಪಕರ ಸಂಘದ ಮಧ್ಯೆ ಒಂದು ಒಪ್ಪಂದವಾಗಿದ್ದು, ಅದರ ಪ್ರಕಾರ ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಚಿತ್ರ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ. ಕೇರಳದ 600 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಮೂರು ವಾರಗಳ ಕಾಲ ಬೇರೆ ಯಾವುದೇ ಚಿತ್ರ ಬಿಡುಗಡೆಯಾಗುವಂತಿಲ್ಲ.

ಆ.12ರಿಂದ ಮೂರು ವಾರಗಳ ಕಾಲ ಇಡೀ ಕೇರಳದಲ್ಲಿ ಮೋಹನ್ ಲಾಲ್ ಅವರ ಈ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾ ಸಹ ಬಿಡುಗಡೆಯಾಗುವಂತಿಲ್ಲ ಮತ್ತು ಪ್ರದರ್ಶನವಾಗುವಂತಿಲ್ಲ. ಇದಕ್ಕೆ ಕಾರಣವೆಂದರೆ ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. ಚಿತ್ರಕ್ಕೆ ಹಾಕಿದ ಹಣ ಬರಬೇಕೆಂದರೆ ಚಿತ್ರಮಂದಿರಗಳಲ್ಲೇ ಪ್ರದರ್ಶನವಾಗಬೇಕು. ಕಡಿಮೆ ಚಿತ್ರಮಂದಿರಗಳಲ್ಲಿ ಮತ್ತು ಇನ್ನಿತರ ಚಿತ್ರಗಳ ಸ್ಪರ್ಧೆ ಮಧ್ಯದಲ್ಲಿ ಅಷ್ಟೊಂದು ಹಣ ವಾಪಸ್​​ ಪಡೆಯುವುದು ಬಹಳ ಕಷ್ಟ. ಮೇಲಾಗಿ, ಚಿತ್ರ ಕಳೆದ ಒಂದೂವರೆ ವರ್ಷಗಳಿಂದ ಬಿಡುಗಡೆಗೆ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಚಿತ್ರಕ್ಕೊಂದು ರಿಯಾಯಿತಿ ಕೊಡುವುದಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದು, ಮೋಹನ್ ಲಾಲ್ ಜೊತೆಗೆ ಕೀರ್ತಿ ಸುರೇಶ್, ಸುಹಾಸಿನಿ, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಸಂತಸ ತಂದಿದೆ: ಮೋಹನ್ ಲಾಲ್

ABOUT THE AUTHOR

...view details